ಮೈಸೂರು: ಜಿಲ್ಲೆಯ ಕೆ.ಆರ್.ನಗರದ ಎಪಿಎಂಸಿ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಸಾರಾ ಮಹೇಶ್ ಬೆಂಬಲಿಗರಿಗೆ ಹಿನ್ನಡೆಯಾಗಿದೆ. ಎಪಿಎಂಸಿ ಅಧ್ಯಕ್ಷ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಎಪಿಎಂಸಿಯಲ್ಲಿ ಬಹುಮತವಿದ್ದರೂ ಜೆಡಿಎಸ್ ಅಧಿಕಾರ ಕಳೆದುಕೊಂಡಂತಾಗಿದೆ.
Advertisement
ಕೇವಲ ಮೂರು ಸ್ಥಾನಗಳಿದ್ದ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಜೆಡಿಎಸ್, ಬಿಜೆಪಿಯ ಆರು ಮಂದಿ ಸದಸ್ಯರನ್ನು ಕಾಂಗ್ರೆಸ್‍ಗೆ ಸೆಳೆಯುವ ಮೂಲಕ ಕಾಂಗ್ರೆಸ್‍ನ ನಟರಾಜ್ ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು
Advertisement
3 ಬಿಜೆಪಿ ಹಾಗೂ 3 ಜೆಡಿಎಸ್ ಸದಸ್ಯರನ್ನು ಸೆಳೆದ ಜಿ.ಟಿ.ಹರೀಶ್ ಗೌಡ ಕಾಂಗ್ರೆಸ್ ಗೆ ಅಧಿಕಾರ ತಂದುಕೊಟ್ಟು ಪಕ್ಷ ಸೇರುವ ಮುನ್ನವೇ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.
Advertisement
Advertisement
ಕೆ.ಆರ್.ನಗರ ಎಪಿಎಂಸಿಯಲ್ಲಿ ಪಕ್ಷಗಳ ಬಲಾಬಲ ಹೀಗಿದ್ದು, ಕಾಂಗ್ರೆಸ್ 3, ಜೆಡಿಎಸ್ 10, ಬಿಜೆಪಿ 3 ಸ್ಥಾನಗಳನ್ನು ಹೊಂದಿವೆ. ಇದರಲ್ಲಿ ಬಿಜೆಪಿಯ ಮೂವರು ಮತ್ತು ಜೆಡಿಎಸ್ ನ ಮೂವರು ಹಾಗೂ ಕಾಂಗ್ರೆಸ್ ನ ಮೂವರು ಒಟ್ಟು 9 ಸದಸ್ಯರ ಮತದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿದೆ.