– ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ಮಾರ್ಕೆಟ್ ಪಾರ್ಕಿಂಗ್
ಬೆಂಗಳೂರು: ಗಬ್ಬೆದ್ದು ನಾರುತ್ತಿದ್ದ ಕೆ.ಆರ್ ಮಾರ್ಕೆಟ್ ಪಾರ್ಕಿಂಗ್‌ಗೆ (KR Market Parking) ಹೊಸ ಕಳೆ ಬಂದಿದೆ. ಇಷ್ಟು ದಿನ ಪಾರ್ಕ್ ಮಾಡಲು ಜನ ಭಯಪಡುತ್ತಿದ್ದ ಮಾರುಕಟ್ಟೆಯ ಪಾರ್ಕಿಂಗ್ ಲಾಟ್‌ಗೆ ಹೈಟೆಕ್ ಸ್ಪರ್ಶವನ್ನ ಜಿಬಿಎ (GBA) ನೀಡಿದೆ. ಜಿಬಿಎ ಬ್ರ್ಯಾಂಡ್ ಬೆಂಗಳೂರಿನ ಮೊದಲ ಪ್ರಾಜೆಕ್ಟ್ ಸಿದ್ಧವಾಗುತ್ತಿದ್ದು, ಇನ್ನೇನು ಕೆಲ ದಿನಗಳಲ್ಲೇ ಉದ್ಘಾಟನೆಯಾಗಲಿದೆ.
ಕೆ.ಆರ್ ಮಾರ್ಕೆಟ್‌ನ ಅಂಡರ್‌ಗ್ರೌಂಡ್‌ನಲ್ಲಿರುವ ಪಾರ್ಕಿಂಗ್ ಜಾಗ ಅನೇಕ ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿತ್ತು. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಹಾಗೂ ವಾಹನಗಳನ್ನ ನಿಲ್ಲಿಸಲು ಜನರು ಪರದಾಡುವಂತೆ ಆಗಿತ್ತು. ಹೀಗಾಗಿ ಸಾಕಷ್ಟು ಜನರು ಪಾರ್ಕಿಂಗ್ ಲಾಟ್ ಅನ್ನ ಸ್ವಚ್ಚ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೀಗಾ ಜಿಬಿಎ ಹಾಳಾಗಿದ್ದ ಪಾರ್ಕಿಂಗ್ ಜಾಗಕ್ಕೆ ಹೊಸ ರೂಪವನ್ನ ನೀಡಿದೆ. ಹೈಟೆಕ್ ಟಚ್‌ನ ಈ ಪಾರ್ಕಿಂಗ್ ಲಾಟ್‌ನ ಕೊನೆ ಹಂತದ ಕೆಲಸಗಳು ನಡೆಯುತ್ತಿದೆ. ಇದನ್ನೂ ಓದಿ: ಪತ್ರಿಕೋದ್ಯಮದ ತಪಸ್ವಿ ಪಿ. ರಾಮಯ್ಯ ವಿಧಿವಶ – ಹೆಚ್‌ಡಿಡಿ, ಸಿದ್ರಾಮಯ್ಯ ಸೇರಿ ಗಣ್ಯರಿಂದ ಸಂತಾಪ
ಇನ್ನೂ ಈ ಹೈಟೆಕ್ ಪಾರ್ಕಿಂಗ್ ಲಾಟ್ ಯಾವುದೆ ಮಾಲ್‌ಗಳಿಗೂ ಕಮ್ಮಿಇಲ್ಲದ ರೀತಿಯಲ್ಲಿ ನಿರ್ಮಿಸಲಾಗಿದೆ. ರೈಟ್ ಪಾರ್ಕಿಂಗ್ ಎಂಬ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲಾಗಿದ್ದು, ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಹೊಸ ವಿನ್ಯಾಸ ನೀಡಲಾಗಿದೆ. ಪಾರ್ಕಿಂಗ್ ಜಾಗದ ತುಂಬೆಲ್ಲಾ ಬಣ್ಣ ಬಣ್ಣದ ಚಿತ್ತಾರಗಳನ್ನ ಬಿಡಿಸಿ ಅತ್ಯಾಕರ್ಷಕವಾಗಿ ಮಾಡಲಾಗಿದೆ. ಇನ್ನೂ ಸುಮಾರು 400 ಬೈಕ್ ಹಾಗೂ 200 ಕಾರುಗಳನ್ನ ನಿಲ್ಲಿಸುವಷ್ಟು ವಿಸ್ತಾರವಾಗಿದ್ದು, 24 ಗಂಟೆಯೂ ತೆರೆದಿರುತ್ತದೆ. ಸುಮಾರು 62ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಹೆಚ್‌ಡಿ ಮತ್ತು ಎಐ ತಂತ್ರಜ್ಞಾನದ ಕ್ವಾಲಿಟಿಯನ್ನ ಹೊಂದಿವೆ. ಇಷ್ಟೇ ಅಲ್ಲದೇ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯವನ್ನು ಕೂಡ ಈ ಪಾರ್ಕಿಂಗ್ ಲಾಟ್ ಹೊಂದಿದೆ. ಇದನ್ನೂ ಓದಿ: ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
ಇನ್ನೂ ಕೆ.ಆರ್ ಮಾರ್ಕೆಟ್‌ಗೆ ಬರುವ ಜನರು ಪಾರ್ಕಿಂಗ್ ಮಾಡಲು ಜಾಗವಿಲ್ಲದೇ ಪರದಾಡುತ್ತಿದ್ದು, ಈ ಪಾರ್ಕಿಂಗ್ ಜಾಗ ಬಹಳಷ್ಟು ಸಹಾಯಕವಾಗಲಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಫ್ರೀ ವೈಫೈ ವ್ಯವಸ್ಥೆ ಜೊತೆಗೆ ಪ್ಯಾನಿಕ್ ಬಟನ್ ವ್ಯವಸ್ಥೆಯೂ ಇದೆ. ಅಷ್ಟೇ ಅಲ್ಲದೇ ಬೈಕ್‌ಗೆ 1 ಗಂಟೆಗೆ 10 ರೂ, ಕಾರಿಗೆ 20 ರೂ ನಿಗದಿ ಮಾಡಲಾಗಿದ್ದು, ಪೇಪರ್‌ಲೆಸ್ ಟಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಪಿಸ್ತೂಲ್, ಹಣದ ಜೊತೆ ಕಾಂಗ್ರೆಸ್ ಮುಖಂಡ ಡ್ಯಾನ್ಸ್ – ವಿಡಿಯೋ ವೈರಲ್
ಒಟ್ಟಾರೆಯಾಗಿ ಇಷ್ಟುದಿನ ನಿರ್ವಹಣೆ ಇಲ್ಲದೇ ಹಾಳಾಗಿದ್ದ ಕೆ.ಆರ್ ಮಾರ್ಕೆಟ್ ಪಾರ್ಕಿಂಗ್ ಜಾಗಕ್ಕೆ ಹೊಸ ಲುಕ್ ಸಿಕ್ಕಿದ್ದು, ಆದಷ್ಟು ಬೇಗ ಉದ್ಘಾಟನೆಯಾದರೆ ಜನರಿಗೂ ಅನುಕೂಲವಾಗಲಿದೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 3.08 ಕೋಟಿ ರೂ. ಸಂಗ್ರಹ

