ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸಭೆಗೆ ಗೈರಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ (Pankaj Kumar Pandey) ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ಪಂಕಜ್ ಪಾಂಡೆ ಅವರನ್ನ ವರ್ಗಾವಣೆಗೊಳಿಸಿದ್ದು, BWSSB ಚೇರ್ಮನ್ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಕೆಪಿಟಿಸಿಎಲ್ ಎಂಡಿ ಹೆಚ್ಚುವರಿ ಹೊಣೆ ನೀಡಿರುವುದಾಗಿ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ – ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್?

ಕಾರಣ ಏನು?
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಭೆಗೆ ಪಂಕಜ್ ಕುಮಾರ್ ಪಾಂಡೆ ಗೈರಾಗಿದ್ದರು. ಇದಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ಕೂಡ ಕೊಟ್ಟಿದ್ದರು. ಜೊತೆಗೆ ಸಿಎಂ ಶಿಸ್ತು ಕ್ರಮಕ್ಕೂ ಮುಂದಾಗಿದ್ದರು. ಆದ್ರೆ ಸಚಿವ ಕೆ.ಜೆ ಜಾರ್ಜ್ ಅವರ ಕಾರಣಕ್ಕೆ ಶಿಸ್ತು ಕ್ರಮ ಕೈಬಿಟ್ಟು ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದಾರೆ. ಇದನ್ನೂ ಓದಿ: ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವ ಆಗಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ

ಶಿಸ್ತು ಕ್ರಮ ಕೈಬಿಟ್ಟಿದ್ದೇಕೆ?
ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ದ ಜಾರ್ಜ್ ಅವರು ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪಂಕಜ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಜಾರ್ಜ್ ಅವರು ರಾಜೀನಾಮೆ ಮಾತನ್ನು ಆಡುತ್ತಿದ್ದಂತೆ ಸಿಎಂ ಸಮಾಧಾನ ಮಾಡಿ ಅವರನ್ನು ಕಳಹಿಸಿದ್ದರಂತೆ. ಹೀಗಾಗಿ ಶಿಸ್ತುಕ್ರಮ ಕೈಬಿಟ್ಟಿರೋದಾಗಿ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಯೋಜನೆಗೆ ಪಂಚಾಯತ್‌ಗಳು ವಿರೋಧಿಸಿ ಜಾಹೀರಾತು ನೀಡಿದ್ರೆ ಒಪ್ಪುತ್ತೀರಾ? – ಸದನದಲ್ಲಿ ಕೋಲಾಹಲ

