ಬೆಂಗಳೂರು: ಸರ್ಕಾರವನ್ನು ಪಿಎಸ್‍ಐ ಹಗರಣದಲ್ಲಿ ಇಕ್ಕಟಿಗೆ ಸಿಲುಕಿಸುತ್ತಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾಮಾನ್ಯ ವ್ಯಕ್ತಿಯಲ್ಲ. ಬೇರೆ ಅವರ ಮೇಲೆ ಆರೋಪ ಮಾಡುವ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್‍ನದ್ದು ದೊಡ್ಡ ಭ್ರಷ್ಟಾಚಾರವೇ ಇದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮತ್ತು ಕುಟುಂಬ ಸಾಮಾನ್ಯ ಅಲ್ಲ. ಅವರು ಮಾಡಿರುವ ಹಣ ಮಾಧ್ಯಮಗಳು ಹೇಳ್ತಿರೋದು ಅಲ್ಪಪ್ರಮಾಣದಲ್ಲಿ ಮಾತ್ರ. ಯಾರೋ ಪುಣ್ಯಾತ್ಮರು ಈಗ ಹೊರಗೆ ಬಂದು ಆರೋಪ ಮಾಡಿದ್ದಾರೆ. ಅವ್ರ ಭ್ರಷ್ಟಾಚಾರ ದೊಡ್ಡದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನರ್ಸ್ ಸರ್ಟಿಫಿಕೇಟ್ ದಂಧೆಯಲ್ಲಿ ಅಶ್ವಥ್ ನಾರಾಯಣ್ ಭಾಗಿಯಾಗಿದ್ದಾರೆ: ಕುಮಾರಸ್ವಾಮಿ
Advertisement
Advertisement
ಕಾಂಗ್ರೆಸ್ ಸರ್ಕಾರ ಕೆಪಿಎಸ್‍ಸಿಯಲ್ಲಿ ದೊಡ್ಡ ದೊಡ್ಡ ಹಗರಣ ನಡೆದಿದೆ. ಸದಸ್ಯರ ನೇಮಕಾತಿ ಯಲ್ಲಿ ಅಕ್ರಮ ಆಗಿದೆ. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್‍ಸಿಯನ್ನು ಓಪನ್ ಮಾರ್ಕೆಟ್ ಮಾಡಿದ್ದರು. ಎಸಿ, ಡಿವೈಎಸ್‍ಪಿಗೆ ಇಷ್ಟು ಹಣ ಅಂತ ನಿಗದಿ ಮಾಡಿ ಓಪನ್ ಆಗಿ ಭ್ರಷ್ಟಾಚಾರ ಮಾಡುತ್ತಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್‍ಸಿ ಅಧ್ಯಕ್ಷರ ನೇಮಕದಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಅಧ್ಯಕ್ಷರು, ಸದಸ್ಯರು ಅಭ್ಯರ್ಥಿಗಳ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಇವತ್ತು ಆ ಹಣ ವಾಪಸ್ ಆಗಿಲ್ಲ. ನನ್ನ ಬಳಿ ಬಂದು ಹಣ ಕೊಡಿಸಿ ಅಂತ ಅನೇಕರು ಕೇಳಿಕೊಂಡಿದ್ದಾರೆ ಅಂತ ಆರೋಪ ಹೊರಿಸಿದರು.
Advertisement
ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಹೀಗಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ. ಕಾಂಗ್ರೆಸ್‍ನ ಭ್ರಷ್ಟಾಚಾರವನ್ನು ಬಿಜೆಪಿ ಮುಂದುವರೆಸಿಕೊಂಡು ಬಂದಿದೆ. ಡ್ರಗ್ಸ್ ಕೇಸ್, ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಎಲ್ಲದರಲ್ಲೂ ಅಕ್ರಮ ಆಗಿದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ತಾಕತ್ತಿದ್ರೆ ನನ್ನನ್ನು ಅರೆಸ್ಟ್ ಮಾಡಲಿ: ಪ್ರಿಯಾಂಕ್ ಖರ್ಗೆ