ಬೆಂಗಳೂರು: ಕೆಪಿಎಸ್‍ಸಿ ಪರೀಕ್ಷೆ (KPSC Exam) ಅವಾಂತರ ಮತ್ತು ಅಕ್ರಮಗಳ ಬಗ್ಗೆ ಕಲಾಪದಲ್ಲಿ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಉತ್ತರ ನೀಡಿದ್ದಾರೆ.
ಕೆಪಿಎಸ್‍ಸಿಯಲ್ಲಿ ಅನೇಕ ಸಲ ಅವಾಂತರ, ಹಗರಣ ಆಗಿದೆ. ನಾವು ಇದನ್ನ ಅಲ್ಲಗಳೆಯಲ್ಲ. ಅಶೋಕ್ (R.Ashok) ಆರೋಪಕ್ಕೆ ನಮ್ಮ ತಕರಾರಿಲ್ಲ. ಕೆಪಿಎಸ್‍ಸಿ ಸುಧಾರಣೆ ಆಗಬೇಕು. ಇದಕ್ಕೆ ವಿಪಕ್ಷಗಳು ಸಲಹೆ ಕೊಡಲಿ, ಸ್ವೀಕರಿಸ್ತೇವೆ. ಕೆಪಿಎಸ್‍ಸಿ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡ್ತಿದ್ದೇವೆ. ಕಾಯ್ದೆಯಲ್ಲಿ ತಿದ್ದುಪಡಿ ತರುತ್ತಿದ್ದೇವೆ ಹೇಳಿದ್ದಾರೆ.
ಕೆಪಿಎಸ್‍ಸಿ ಭಾಷಾಂತರಕಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ತೆಗೆದುಕೊಳ್ಳೋಲಾಗುವುದು. ಭಾಷಾಂತರ ಗೊಂದಲ ತಡೆಗೆ ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಇಂಗ್ಲೀಷ್‍ಗೆ ಭಾಷಾಂತರ ಮಾಡಲು ಕೆಪಿಎಸ್‍ಸಿಗೆ ಸೂಚನೆ ನೀಡಿದ್ದಾರೆ.
ಈಗ ನಡೆದಿರುವ ಕೆಪಿಎಸ್‌ಸಿ ಪರೀಕ್ಷೆಯನ್ನು ರದ್ದು ಮಾಡಬೇಕು. ಮರು ಪರೀಕ್ಷೆ ನಡೆಸಬೇಕು ಎಂಬ ಬಿಜೆಪಿ ಆಗ್ರಹವನ್ನು ಸಿಎಂ ತಳ್ಳಿ ಹಾಕಿದ್ದರು. ನನಗೆ ಮರುಪರೀಕ್ಷೆಗೆ ಆದೇಶ ನೀಡಲು ಬರಲ್ಲ ಎಂದಿದ್ದಾರೆ.