ಬೆಂಗಳೂರು: ಕೆಪಿಎಸ್‍ಸಿ ಬೋರ್ಡ್ (KPSC Board) ವಿರುದ್ಧ ಅಭ್ಯರ್ಥಿಗಳು ಸಿಡಿದೆದ್ದಿದ್ದು, ಇಂದು ಭಾರೀ ಹೈಡ್ರಾಮಾವೊಂದು ನಡೆಯಿತು.
ಅಭ್ಯರ್ಥಿಯೊಬ್ಬ ನೂರಾರು ಪತ್ರಗಳನ್ನು ಬೋರ್ಡ್ ಮುಂದೆ ಚೆಲ್ಲಿ ತನ್ನ ಆಕ್ರೋಶ ಹೊರಹಾಕಿದ್ದಾನೆ. ಪರೀಕ್ಷೆ ನಡೆದು ಎರಡು ವರ್ಷ ಕಳೆದರೂ ಪ್ರಾವಿಷನ್ ಲಿಸ್ಟ್ ಹಾಗೂ ಫೈನಲ್ ಲಿಸ್ಟ್ ಬಿಟ್ಟಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಕಿಡಿಕಾರಿದ್ದಾನೆ.
Advertisement
Advertisement
ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಕಾಂತಕುಮಾರ್ ಪ್ರತಿಕ್ರಿಯಿಸಿ, ಕೆ.ಪಿಎಸ್.ಸಿ ನೋಟಿಫಿಕೇಶನ್ ಆಗಿ ಎರಡು ವರ್ಷ ಆಗಿದೆ. ಗ್ರೂಪ್ ಎ, ಬಿ, ಸಿ ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಎಕ್ಸಾಂಗಳು ನಡೆದಿತ್ತು. ಪರೀಕ್ಷೆ ಬರೆದಿದ್ದರೂ ಇನ್ನೂ ಫೈನಲ್ ಲಿಸ್ಟ್ ಬಿಟ್ಟಿಲ್ಲ. ಆರು ತಿಂಗಳಿಂದ ಪ್ರತಿದಿನ ಮನವಿ ಕೊಟ್ಟಿದ್ದೇವೆ. ಮೂವ್ ಮಾಡ್ತೀವಿ ಅಂತ ಹೇಳ್ತಾರೆ. ಆದರೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ
Advertisement
Advertisement
ಕೆ.ಪಿ.ಎಸ್.ಸಿ ಒಂದು ಎಕ್ಸಾಂ ಪಾಸ್ ಆಗಬೇಕು ಅಂದ್ರೆ ಕಷ್ಟ ಇದೆ. ಸಾಕಷ್ಟು ಜನ ಬಡ ವಿದ್ಯಾರ್ಥಿಗಳು ಇದರಲ್ಲಿ ಎಕ್ಸಾಂ ಬರೆಯೋಕೆ ರೆಡಿಯಾಗಿದ್ದಾರೆ. ಆದರೆ ಇವರು ಹೋಲ್ಡ್ ಮಾಡ್ತಿರೋದಕ್ಕೆ ಕಾರಣ ಏನು ಗೊತ್ತಿಲ್ಲ. ನಾವೇನಾದರು ಕೊಡಬೇಕೋ ಏನೋ ಗೊತ್ತಿಲ್ಲ. ಟೈಂ ಟು ಟೈಂ ಎಕ್ಸಾಂ ನಡೆಸಬೇಕು. ಇವರ ಉದ್ದೇಶ ಏನು ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ
ಪ್ರತಿಯೊಬ್ಬ ಮಿನಿಸ್ಟರ್ ಹತ್ರ ನಮ್ಮ ಬೇಡಿಕೆ ಇಟ್ಟಿದ್ದೇವೆ. ಪೊಲೀಸ್ ಫೋರ್ಸ್ ಯೂಸ್ ಮಾಡಿಕೊಂಡು ನಮ್ಮನ್ನು ತಡೆಯುತ್ತಿದ್ದಾರೆ. ನಾನು ಒಬ್ಬ ಮಾತ್ರ ಅಲ್ಲ, ನನ್ನ ಹಿಂದೆ ಲಕ್ಷ ಲಕ್ಷ ಜನ ಇದ್ದಾರೆ. ಆದರೆ ಅವರ್ಯಾರನ್ನೂ ಬೋರ್ಡ್ ಹತ್ರ ಬರೋಕೆ ಬಿಡುತ್ತಿಲ್ಲ. ಬಂದರೆ ಅವರನ್ನು ಫೋರ್ಸ್ ಯೂಸ್ ಮಾಡಿ ಕಳುಹಿಸುತ್ತಾರೆ ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾ ಅಭ್ಯರ್ಥಿಯನ್ನು ವಶಕ್ಕೆ ಪಡೆದರು.