– ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ದೋಷಾರೋಪ ಸಲ್ಲಿಕೆ
ಬೆಂಗಳೂರು: ಕೋಟಿ ಕೋಟಿ ಹಣ ಸಂಪಾದನೆಗಾಗಿ ಕ್ರಿಕೆಟ್ ಆಟವನ್ನೇ ಪಣಕ್ಕಿಟ್ಟಿದವರು ಅಂದರ್ ಆಗಿದ್ದು ಆಯ್ತು, ಬೇಲ್‍ನ ಮೇಲೆ ಬಿಡುಗಡೆಯೂ ಆದರು. ಆದ್ರೀಗ ಆ ಎಲ್ಲಾ ಖತರ್ನಾಕ್ ಟೀಂ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರಕರಣಕ್ಕೆ ಕೈ ಜೋಡಿಸಿದ್ದರು ಎನ್ನುವುದನ್ನು ಸಾಕ್ಷ್ಯ ಸಮೇತ ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.
ಕೆಪಿಎಲ್‍ನ ಎರಡು ಟೀಂಗಳ ಮಾಲೀಕರಾದ ಆಲಿ, ಅರವಿಂದ ರೆಡ್ಡಿ, ಆಟಗಾರರಾದ ಗೌತಮ್, ಖಾಜಿ ವಿರುದ್ಧ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳ ಪ್ರಕಾರ, ಮೊದಲು ಅಂತರರಾಷ್ಟ್ರೀಯ ಮಟ್ಟದ ಬುಕ್ಕಿಗಳಿಂದ ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕವಾಗಿತ್ತು. ಬಳಿಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದುರಾಲೋಚನೆಯುಳ್ಳ ಮಾಲೀಕರು ತಮ್ಮ ತಂಡದ ಕೆಲ ಆಟಗಾರರನ್ನು ಸಂಪರ್ಕಿಸಿದ್ದರು. ನಂತರ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ನಡೆದಿತ್ತು ಎಂದು ತಿಳಿಸಲಾಗಿದೆ.
Advertisement
Advertisement
ಮ್ಯಾಚ್ ಫಿಕ್ಸಿಂಗ್ ಟ್ರಿಕ್ಸ್:
* ಒಂದು ಓವರಿನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್
* ಅತಿ ಹೆಚ್ಚು ಬಾಲ್‍ಗಳಲ್ಲಿ ಕಡಿಮೆ ರನ್ ಗಳಿಸುವಂತೆ ಫಿಕ್ಸ್
* ಫುಲ್ ಸ್ಲೀವ್ ಶರ್ಟ್ ಅನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್
* ಪದೇ ಪದೇ ಬ್ಯಾಟ್‍ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿದ್ದ ಫಿಕ್ಸರ್ಸ್