ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ (KPCL) 622 ಖಾಲಿ ಹುದ್ದೆಗಳನ್ನು ತುಂಬಲು ಫೆಬ್ರವರಿ 18ರಂದು ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ವೆಬ್‌ಸೈಟ್‌ನಲ್ಲಿ ಬುಧವಾರ ಪ್ರಕಟಿಸಿದೆ.
ಆಕ್ಷೇಪಣೆಗಳ ಪರಿಶೀಲನೆ ನಂತರ, ಕಳೆದ ಬಾರಿಯಂತೆಯೇ ಈ ಬಾರಿಯೂ, ಪ್ರತಿ ತಪ್ಪು ಉತ್ತರಕ್ಕೆ 1/3ರಷ್ಟು ನಕಾರಾತ್ಮಕ ಅಂಕ ಕಡಿತಗೊಳಿಸಿ ಅಂತಿಮ ಅಂಕಪಟ್ಟಿ ಸಿದ್ದಪಡಿಸುವಂತೆ ಕೆಪಿಸಿಎಲ್ ಸಂಸ್ಥೆ ಲಿಖಿತ ರೂಪದಲ್ಲಿ ಸೂಚಿಸಿತ್ತು. ಆ ಪ್ರಕಾರವಾಗಿ, ಹುದ್ದೆವಾರು ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಕಡತಕ್ಕೆ ಹೆಚ್‌ಡಿಕೆ ಸಹಿ!
Advertisement
ಅಂತಿಮ ಅಂಕಪಟ್ಟಿಯನ್ನು ಕೆಪಿಸಿಎಲ್ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಸಿಎಲ್ ಕ್ರಮ ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
Advertisement
Advertisement
ಕೆಪಿಸಿಎಲ್‌ನ ಎಇ, ಜೆಇ (ವಿವಿಧ ವಿಭಾಗಗಳ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆಸಲಾಗಿತ್ತು. ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಅನ್ನೋದೇ ತಪ್ಪು: ಆರ್.ಅಶೋಕ್
Advertisement