– ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ
– ಮಹಿಳಾ ಪೀಡಕರು ಕೂಡ ಇದ್ದಾರೆ
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನಳಿನ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್. ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದವ. ನಿಮ್ಮ ಸಾಧನೆಗಳು ಇದ್ರೆ ಅದರ ಬಗ್ಗೆ ಚರ್ಚೆ ಮಾಡಬೇಡಿ. ಅದನ್ನ ಬಿಟ್ಟು ಈ ರೀತಿ ನೀವು ಮಾತಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ಅವರ ಬಗ್ಗೆ ಟೀಕೆ ಮಾಡುವ ಶಕ್ತಿ ನನಗಿಲ್ಲ: ಹೆಚ್.ಡಿ ದೇವೇಗೌಡ
Advertisement
Advertisement
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆಗಿದ್ರೆ ನಿಮ್ಮಲ್ಲೆ ಎನ್ಸಿಬಿ, ಇಡಿ, ಐಡಿ, ಸಿಬಿಐ, ಇತ್ಯಾದಿಗಳು ಇದೆ ತನಿಖೆ ಮಾಡಿ. ಸೋನಿಯಾ ಗಾಂಧಿ ಬೇಲ್ ನಲ್ಲಿ ಇದ್ದಾರೆ ಅಂತೀರಲ್ಲ. ನಿಮ್ಮ ಅಮಿತ್ ಶಾ ಬೇಲ್ ನಲ್ಲಿ ಇಲ್ಲದೇ ಬೇರೆ ಯಾವುದರಲ್ಲಿ ಇದ್ದಾರೆ. ನಿಮ್ಮ ಲೀಡರ್ ತರ ಕೊಲೆ ಕೇಸ್ ನಲ್ಲಿ ಜೈಲಿಗೆ ಹೊಗಿಲ್ಲ. ನೀನೊಬ್ಬ ಅವಿವೇಕಿಗಳ, ಹುಚ್ಚರ ಬ್ರ್ಯಾಂಡ್ ಅಂಬಾಸಿಡರ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್
Advertisement
ನಿಮ್ಮ ಮೋದಿ 7 ವರ್ಷದಲ್ಲಿ 84 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನ ಬಿಟ್ಟು ಬೇರೆ ಏನೇನೋ ಚರ್ಚೆ ಮಾಡ್ತಿರಲ್ಲ. ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ. ರೇಣುಕಾಚಾರ್ಯ, ಸದಾನಂದಗೌಡ, ಪ್ರತಾಪ್ ಸಿಂಹ ರಂತಹ ಅನೇಕ ಮಹಿಳಾ ಪೀಡಕರು ಇದ್ದಾರೆ. ಅರವಿಂದ ಲಿಂಬಾವಳಿ, ಯತ್ನಾಳ್ ರಂತಹ ಸಲಿಂಗಕಾಮಿಗಳು ಇದ್ದಾರೆ. ತಮ್ಮಲ್ಲೇ ಹುಳುಕು ಇಟ್ಕೊಂಡು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದೀರಿ. ಒಬ್ಬ ಅಧ್ಯಕ್ಷರ ಮೇಲೆ ಆರೋಪ ಮಾಡುವ ಮೊದಲು ಯೋಚನೆ ಮಾಡಿ ಮಾತನಾಡಿ ಎಂದು ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್