ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಸ್ತಾಪ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ಪಟ್ಟು ಬಿಡದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪರವಾಗಿ ಹಿರಿಯ ನಾಯಕರ ಒಲವಿಲ್ಲ ಎಂದಿದ್ದಾರೆ. ಆಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಧುಸೂದನ್ ಮಿಸ್ತ್ರಿ ವರದಿಯನ್ನು ಪ್ರಸ್ತಾಪಿಸಿದ್ದಾರೆ. ನಿಮ್ಮನ್ನು ಬಿಟ್ಟು ಎಲ್ಲಾ ಹಿರಿಯ ನಾಯಕರುಗಳು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲು ಸಮ್ಮತಿಸಿದ್ದಾರೆ ಎಂದಿದ್ದಾರೆ. ಮಧುಸೂದನ್ ಮಿಸ್ತ್ರಿ ಅಭಿಪ್ರಾಯ ಸಂಗ್ರಹಿಸುವಾಗ ಯಾವ ಹಿರಿಯ ನಾಯಕರು ಡಿಕೆಶಿಯನ್ನ ವಿರೋಧಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತೇ ಎಂದು ಸಿದ್ದರಾಮಯ್ಯರಿಗೆ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಒಂದು ಕಡೆ ತಮ್ಮ ಬೆಂಬಲಿಗರಿಗೆ ಕೆಪಿಸಿಸಿ ಪಟ್ಟ ಕಟ್ಟುವ ಪ್ರಯತ್ನಕ್ಕೆ ಹಿನ್ನಡೆಯಾದ್ರೆ, ಇನ್ನೊಂದು ಕಡೆ ಎಲ್ಲಾ ಹಿರಿಯ ನಾಯಕರು ಡಿಕೆಶಿ ಬೆಂಬಲಕ್ಕೆ ನಿಂತಿದ್ದು ಕಂಡು ಸಿದ್ದರಾಮಯ್ಯ ಶಾಕ್ ಆಗಿದ್ದಾರೆ. ಡಿಕೆಶಿಯನ್ನೆ ವಿರೋಧಿಸುತ್ತಿದ್ದ ಹಿರಿಯ ಕೈ ನಾಯಕರು ಡಿಕೆಶಿ ಪರ ನಿಂತಿದ್ದಾರೆ ಎಂದರೆ ಅದು ತಮ್ಮ ವಿರುದ್ಧದ ನಿಲುವು ಅನ್ನೋದನ್ನ ಅರ್ಥೈಸಿಕೊಂಡು ಸಿದ್ದರಾಮಯ್ಯ ಇನ್ನಿಲ್ಲದ ಅಸಹಯಕತೆಗೆ ಒಳಗಾಗಿರುವದಂತು ಹೌದು ಎನ್ನುತ್ತಿದೆ ಕಾಂಗ್ರೆಸ್ ಅಂಗಳ.