ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರ ಆಟಾಟೋಪಗಳಿಗೆ ಬ್ರೇಕ್ ಹಾಕಲು ನಂಬಿಕಸ್ಥ ಬಂಟನ ಮೊರೆ ಹೋಗಿದ್ದಾರೆ. ರಾಜೀವ್ ಗಾಂಧಿ ಜೊತೆಗೆ ಆತ್ಮೀಯರಾಗಿದ್ದ ಜಿ.ಪರಮೇಶ್ವರ್ ಸೋನಿಯಾಗಾಂಧಿ ಅವರೊಂದಿಗು ಅಷ್ಟೆ ಒಡನಾಟ ಹೊಂದಿದ್ದಾರೆ. ಡಿಸಿಎಂ ಸ್ಥಾನದಿಂದ ಇಳಿದ ನಂತರ ಪರಮೇಶ್ವರ್ ಸೈಡ್ ಲೈನ್ ಆಗಿದ್ದರು.
Advertisement
ಸಿಎಲ್ ಪಿ ನಾಯಕ, ವಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪಸರಸ್ಪರ ಕತ್ತಿ ಮಸೆಯುತ್ತಿರುವ ರೀತಿ ಕಂಡು ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ತಮ್ಮ ನಂಬಿಕಸ್ಥ ಬಂಟ ಪರಮೇಶ್ವರ್ ಗೆ ಒಗ್ಗಟ್ಡಿನ ಸಭೆ ನಡೆಸಲು ಸೂಚಿಸಿದ್ದಾರೆ.
Advertisement
Advertisement
ಇಷ್ಟು ದಿನ ಪರಮೇಶ್ವರ್ ರನ್ನ ಸೈಡ್ ಲೈನ್ ಮಾಡಿದ ಘಟಾನುಘಟಿಗಳೆ ಪರಮೇಶ್ವರ್ ರನ್ನ ಹುಡುಕಿಕೊಂಡು ಅವರ ನಿವಾಸಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗೆ 7 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ 14 ತಿಂಗಳು ಉಪ ಮುಖ್ಯಮಂತ್ರಿಯಾಗಿ ಕಳೆದ 5 ತಿಂಗಳಿನಿಂದ ಸೈಡ್ ಲೈನ್ ಆಗಿದ್ದ ಪರಮೇಶ್ವರ್ ಮತ್ತೆ ಮುನ್ನಲೆಗೆ ಬಂದಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಪರಸ್ಪರ ಕಾಲು ಎಳೆಯುವ ಪ್ರವೃತ್ತಿ ಕಂಡು ಕಾಂಗ್ರೆಸ್ ಹೈಕಮಾಂಡ್ ತನ್ನ ಆಪ್ತ ಬಂಟನಿಗೆ ಜವಾಬ್ದಾರಿ ನೀಡಿ ಎಲ್ಲಾ ನಾಯಕರಿಗೆ ಶಾಕ್ ನೀಡಿದೆ.