ತುಮಕೂರು: ಭಾರತಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಬಹಳಷ್ಟಿದೆ. ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತ್ರಿವರ್ಣ ಧ್ವಜದ ಮೇಲೆ ತಮ್ಮ ಪಕ್ಷದ ಹಕ್ಕನ್ನು ಪ್ರತಿಪಾದಿಸಿದ್ದಾರೆ.
Advertisement
ತುಮಕೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸ ಇದ್ದು, ಈ ದೇಶಕ್ಕೆ ತಮ್ಮ ಪಕ್ಷದ ಕೊಡುಗೆ ಅಪಾರ ಎಂದರಲ್ಲದೇ ವೇದಿಕೆಯ ಪೋಡಿಯಂ ಮೇಲೆ ಹೊದಿಸಿದ್ದ ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಗ್ರೆಸ್ ಬಾವುಟ ಹಿಡಿದು ತೋರಿಸಿ ತ್ರಿವರ್ಣ ಧ್ವಜದ ಹಕ್ಕುದಾರರು ನಾವು ಎಂದರು. ಇದನ್ನೂ ಓದಿ: ಪಕ್ಷಕ್ಕೆ ಮೋಸ ಮಾಡಲ್ಲ, ಎಲ್ಲಿಂದ್ಲೋ ಬಂದು ಮಂಡ್ಯ ನಮ್ಮದೇ ಅನ್ನೋರಿಗೆ ಮಣೆ ಹಾಕ್ಬೇಡಿ: ಎಸ್‍ಟಿಎಸ್
Advertisement
Advertisement
ಹಾಗೇ ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮಾಡಿದ ದೇಶದ ಆಸ್ತಿ-ಪಾಸ್ತಿಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ರೈಲು, ವಿಮಾನ, ಬಿಎಸ್ ಎನ್ ಎಲ್ ಎಲ್ಲವೂ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಖಾಸಗೀಕರಣ ವಿರೋಧ ಮಾಡಿತ್ತು. ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಹರಾಜು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಈ ದೇಶದಲ್ಲಿ 400 ಸೀಟ್ ಪಡೆದ ಬಲಿಷ್ಠ ಬಿಜೆಪಿ ಸರ್ಕಾರವನ್ನು ಯೂಟರ್ನ್ ಮಾಡುವಂತೆ ಮಾಡಿದ ಶಕ್ತಿ ರೈತ ಸಮುದಾಯಕ್ಕೆ ಇದೆ. ರೈತರ ಹೋರಾಟದ ಪರಿಣಾಮ ಕೃಷಿ ತಿದ್ದುಪಡಿ ಕಾಯಿದೆ ವಾಪಸ್ ಪಡೆದರು ಎಂದು ಕೇಂದ್ರದ ವಿರುದ್ಧ ಗುಡುಗಿದರು. ಇದನ್ನೂ ಓದಿ: ಗೆಹ್ಲೋಟ್ ಸರ್ಕಾರದ ಸಚಿವ ಸಂಪುಟ ಪುನಾರಚನೆ – 15 ಮಂದಿ ಸಂಪುಟ ಸೇರ್ಪಡೆ