Bengaluru CityDistrictsKarnatakaLatestLeading NewsMain Post

ಧರ್ಮಾಧಿಕಾರಿಯವ್ರ ತಮ್ಮನಿಗೆ ಬನ್ನಿ ಒಂದು ಕ್ಷೇತ್ರಕ್ಕೆ ನಿಲ್ಲಿ ಅಂತ ಹೇಳಿದ್ದೆ: ಡಿಕೆಶಿ

Advertisements

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನಿಗೆ ನಾನು ಬನ್ನಿ ಒಂದು ಕ್ಷೇತ್ರಕ್ಕೆ ನಿಲ್ಲಿ ಅಂತ ಹಿಂದೆಯೇ ಹೇಳಿದ್ದೆ. ಆದರೆ ಅವರು ತಮ್ಮ ಸೇವೆಯನ್ನ ಹಾಳು ಮಾಡಿಕೊಳ್ಳಲು ಇಚ್ಛಿಸೋದಿಲ್ಲ. ಹೀಗಾಗಿ ಅವರು ತಿರಸ್ಕರಿಸಿದ್ರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಇಂದು ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನನಗೂ ವೀರೇಂದ್ರ ಹೆಗ್ಗಡೆಯವರಿಗೂ, ಮಂಜುನಾಥನಿಗೂ ಭಕ್ತರಿಗೂ ಇರೋ ಸಂಬಂಧ ಹೇಗೋ ಭಕ್ತನಿಗೂ, ಭಗವಂತನಿಗೂ ಇರುವ ಪ್ರೀತಿ, ವಿಶ್ವಾಸ ಗೌರವ ಅವರ ಮೇಲಿದೆ. ಆದರೆ ವೀರೇಂದ್ರ ಹೆಗ್ಗಡೆ ಅವರು ದೊಡ್ಡ ಕ್ಷೇತ್ರಕ್ಕೆ ಧರ್ಮಾಧಿಕಾರಿ ಆಗಿದ್ದಾರೆ. ಮಾತು ತಪ್ಪದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಅಂತ ಮಾತಿದೆ. ಅವರಿಗೆ ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮಿನೇಟ್ ಮಾಡಿದೆ. ಅವರೂ ಕೂಡ ಒಪ್ಪಿದ್ದಾರೆ. ಅವರು ಮಾಡಿದ ಗ್ರಾಮೀಣ ಅಭಿವೃದ್ಧಿ ಕೆಲಸವನ್ನ ಹಿಂದೆ ಯುಪಿಎ ಇವರು ಮಾಡಿದ ಯೋಜನೆ ಜಾರಿಗೆ ತಂದಿದೆ ಎಂದರು.

ಮಿಲ್ಕ್ ಸೊಸೈಟಿ ಅವರ ಮೂಲಕ ಅನುದಾನ ನೀಡಿದೆ. ಗ್ರಾಮೀಣ ಪ್ರದೇಶದ ದೇವಸ್ಥಾನಗಳಿಗೆ ಪ್ರತೀ ವರ್ಷ ಲಕ್ಷಾಂತರ ಹಣ ನೀಡ್ತಿದ್ರು. ಧರ್ಮಸ್ಥಳದಲ್ಲಿ ಪ್ರಾಮಾಣಿಕತೆ ಇಂದ ಸಮಾಜ ಸೇವೆ ಮಾಡುತ್ತಾ ಬಂದಿದ್ರು. ನಮ್ಮ ರಾಜ್ಯದಿಂದ ಅವರಿಗೆ ಅಭಿನಂದಿಸ್ತೇನೆ. ನನಗೆ ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.

Live Tv

Leave a Reply

Your email address will not be published.

Back to top button