ಬೆಂಗಳೂರು: ಧ್ವನಿವರ್ದಕದ ವಿಷಯ ತೀರ್ಮಾನ ಮಾಡಿ ನಿಗದಿ ಮಾಡಿದ್ದಾರೆ. ನಾನು ಹೇಳುತ್ತೇನೆ, ಇನ್ನೊಬ್ಬರು ಹೇಳ್ತಾರೆ ಅಂತ ಮಾಡೋಕೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
Advertisement
ಮಸೀದಿಗಳಲ್ಲಿ ಮೈಕ್ ತೆರವು ವಿಚಾರದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ದು ಬೇಕಾದಷ್ಟು ತೀರ್ಮಾನ ಆಗಿದೆ. ಸರ್ಕಾರ ಎಲ್ಲಾ ಧರ್ಮದ ವಿಚಾರ, ಯಾರ್ಯಾರು ಏನು ಅಂತ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ತೀರ್ಮಾನ ಮಾಡಿದೆ. ತೀರ್ಮಾನ ಮಾಡಿ ನಿಗದಿ ಮಾಡಿದ್ದಾರೆ. ನಾನು ಹೇಳುತ್ತೇನೆ, ಇನ್ನೊಬ್ಬರು ಹೇಳ್ತಾರೆ ಅಂತ ಮಾಡೋಕೆ ಆಗಲ್ಲ. ಈಗಾಗಲೇ ದೇಶದಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈಗ ಅದನ್ನು ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ
Advertisement
Advertisement
ಇದೇ ಸಂದರ್ಭದಲ್ಲಿ ಮಾಯನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಕೊಟ್ಟಿದೆ. ಚರ್ಚ್, ಮಸೀದಿ, ದೇವಸ್ಥಾನ ಇದಕ್ಕೆ ರೂಲ್ಸ್ ಇದೆ. ತೊಂದರೆಯಾಗದ ರೀತಿಯಲ್ಲಿ ನಡೀತಾ ಇದೆ.ಪರಿಸರ ಇಲಾಖೆ ರೂಲ್ಸ್ ಮಾಡಿದೆ.ಅದರ ಪ್ರಕಾರ ನಡೀತಾ ಇದೆ. ಈಗ ಗೊಂದಲ ಮಾಡುವುದು ಬೇಡ.ಎಲ್ಲರೂ ಒಟ್ಟಾಗಿ ಬಾಳಬೇಕು.ಸರ್ಕಾರ ಇಂತಹ ಗೊಂದಲ ಯಾಕೆ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
v