– ಕಲ್ಲಿದ್ದಲು ಕೊರತೆಗೆ ಗಂಭೀರ ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದು, ಭಾರೀ ಕುತೂಹಲ ಹುಟ್ಟಿಸಿತ್ತು. ಇದೀಗ ರಾಷ್ಟ್ರರಾಜಕಾರಣಕ್ಕೆ ಮಾಜಿ ಸಿಎಂ ಹೋಗ್ತಾರಾ ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಉಂಟು ಶಾಸಕಾಂಗ ಪಕ್ಷದ ನಾಯಕರುಂಟು. ಸಿದ್ದರಾಮಯ್ಯ ರಾಷ್ಟ್ರರಾಜಕಾರಣಕ್ಕೆ ತೆರಳುವ ಬಗ್ಗೆ ನನ್ನ ಜೊತೆ ಯಾವುದೇ ಚರ್ಚೆ ಆಗಿಲ್ಲ. ಎಲ್ಲವೂ ಉಹಾಪೋಹ. ಹೀಗಾಗಿ ಈ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ ಎಂದರು. ಇದನ್ನೂ ಓದಿ: ಸೋನಿಯಾ ಗಾಂಧಿ ಭೇಟಿ ಅಂತ್ಯ- ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಆಹ್ವಾನ?
ಇದೇ ವೇಳೆ ಕಲ್ಲಿದ್ದಲು ಕೊರತೆ, ವಿದ್ಯುತ್ ಕೊರತೆಯಾಗಲಿದೆ ಎಂಬುದರ ಬಗ್ಗೆ ನಾನು ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಸಂಪೂರ್ಣ ಮಾಹಿತಿಯೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ. ನಾನು ಪವರ್ ಮಿನಿಸ್ಟರ್ ಆಗಿದ್ದಾಗ ರಾಜ್ಯದಲ್ಲಿ ಪವರ್ ಹೆಚ್ಚಾಗಿ ಉತ್ಪಾದನೆ ಆಗುತ್ತಿತ್ತು. ಹೆಚ್ಚುವರಿ ಪವರ್ ಅನ್ನ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.
ಈಗ ಏಕೆ ಪವರ್ ಕೊರತೆ ಆಗುತ್ತೆ ಅಂತ ಅವರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಲ್ಲವನ್ನ ರಿಸರ್ಚ್ ಮಾಡುತ್ತಿದ್ದೇನೆ. ನಾನು ಪವರ್ ಮಿನಿಸ್ಟರ್ ನಿಂದ ಹೊರ ಬಂದ ಬಳಿಕ ಹೆಚ್ಚು ಪವರ್ ಮಾರಾಟ ಮಾಡಲಾಗಿದೆ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಕ್ಷಾಮ ಆತಂಕ – ರಾಜ್ಯದ 3 ಸ್ಥಾವರಗಳ ಅರ್ಧಕ್ಕರ್ಧ ಘಟಕಗಳು ಬಂದ್