ಹಾವೇರಿ: ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ವಿಜಯದ ಮಾಲೆ ಹಾಕಿದ್ದಾರೆ. ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿಯ ಈ ವಿಜಯಕ್ಕೆ ದೇವಿ ಕಾರಣವಂತೆ. ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ದೇವಿಯ ಆಶೀರ್ವಾದ ಸಿಕ್ಕಿದೆ. ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೇವಿಗೆ 11 ಕಾಯಿ ಒಡೆದು ಹರಕೆ ತೀರಿಸಿದ್ರು.
Advertisement
ಹೌದು. ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಾಮಪತ್ರ ಸಲ್ಲಿಕೆಗೆ ಡಿಕೆಶಿ 2021 ರ ಅಕ್ಟೋಬರ್ 7 ರಂದು ಆಗಮಿಸಿದ್ರು. ಆಗ ಗ್ರಾಮದೇವತೆ ದೇವಸ್ಥಾನಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದ ಡಿಕೆಶಿ ಕಾಂಗ್ರೆಸ್ ಅಭ್ಯರ್ಥಿ ಮಾನೆ ಪರ ಪ್ರಚಾರಕ್ಕೆ ಆಗಮಿಸಿದ್ದರು. ಪ್ರಚಾರ ಆರಂಭಿಸೋಕೆ ಮುನ್ನ ಡಿಕೆಶಿ ಗ್ರಾಮದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
Advertisement
Advertisement
ಆಗ ಡಿಕೆಶಿ ಗ್ರಾಮದೇವತೆ ಬಳಿ ಹರಕೆ ಹೊತ್ತಿದ್ರಂತೆ. ಬಳಿಕ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಗಳು ನಡೆದು ಕೊನೆಗೆ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮಾನೆಗೆ ಜೈ ಅಂದಿದ್ದಾರೆ. ಹೀಗಾಗಿ ಮಾನೆ ಗೆಲುವಿಗೆ ದೇವಿಯ ಆಶೀರ್ವಾದವೇ ಕಾರಣವಂತೆ. ಹೀಗಂತ ದೀಪಾವಳಿ ಪಾಡ್ಯದ ದಿನವಾದ ಇಂದು ಕೆಪಿಸಿಸಿ ಅಧ್ಯಕ್ಷರು ಹಾನಗಲ್ ಪಟ್ಟಣಕ್ಕೆ ಆಗಮಿಸಿ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ತಮ್ಮ ಜೇಬಿನಿಂದ ಹಣ ತೆಗೆದುಕೊಟ್ಟು 11 ತೆಂಗಿನಕಾಯಿ ತರಿಸಿ, ಕಾಯಿ ಒಡೆದು ಹರಕೆ ತೀರಿಸಿದ್ರು.
Advertisement
ಹಾನಗಲ್ ಪಟ್ಟಣಕ್ಕೆ ಆಗಮಿಸೋ ಮುನ್ನ ಡಿಕೆಶಿಯವರು ಸಿಎಂ ಪ್ರತಿನಿಧಿಸೋ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ್ರು. ಪಟ್ಟಣದ ಹೊರವಲಯದಿಂದ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಯನ್ನು ಬೈಕ್ ರ‍್ಯಾಲಿ ಮೂಲಕ ತೆರೆದ ವಾಹನದಲ್ಲಿ ಸ್ವಾಗತಿಸಿದ್ರು. ಜೆಸಿಬಿ ವಾಹನಗಳ ಮೇಲಿಂದ ಹೂವು ಹಾಕಿ ಸ್ವಾಗತ ಕೋರಿದ್ರು. ಈ ಉಪಚುನಾವಣೆಯ ಗೆಲುವು 2023ಕ್ಕೆ ಇದು ಪ್ರಾರಂಭ. ಇದು ಮೊದಲನೇ ಚುನಾವಣೆ. ಇದು ಟ್ರಯಲ್ ರನ್. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ
ನಿಮ್ಮೆಲ್ಲೂ ಸಂಘಟನೆ ಆಗಬೇಕು, ಇಲ್ಲಿಯೂ ಬದಲಾವಣೆ ಆಗಬೇಕು ಅಂತಾ ಸಿಎಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸೋಕೆ ಚುನಾವಣೆ ಕಹಳೆ ಮೊಳಗಿಸಿದ್ರು. ನಂತರ ಅಲ್ಲಿಂದ ಹಾನಗಲ್ ಪಟ್ಟಣಕ್ಕೆ ಭೇಟಿ ನೀಡಿದ ಡಿಕೆಶಿ, ಗ್ರಾಮದೇವತೆಗೆ ಹರಕೆ ತೀರಿಸಿದ್ರು. ನಂತರ ಕಾಶ್ಮೀರಿ ದರ್ಹಾಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ರು. ಅಲ್ಲಿಂದ ಹೊರಟು ಹಾನಗಲ್ ಪಟ್ಟಣದ ಕುಮಾರೇಶ್ವರ ವಿರಕ್ತಮಠದಲ್ಲೂ ಹನ್ನೊಂದು ತೆಂಗಿನಕಾಯಿ ಒಡೆದ್ರು. ಎಲ್ಲದಕ್ಕೂ ದೇವಿಯ ಮಹಿಮೆ ಅನ್ನುತ್ತಲೆ ಡಿಕೆಶಿ ಟೆಂಪಲ್, ದರ್ಗಾ ಮತ್ತು ಮಠಕ್ಕೆ ಭೇಟಿ ನೀಡಿ ವಾಪಸ್ ಆದರು.
ಜಿದ್ದಾಜಿದ್ದಿನ ಕಣವಾಗಿದ್ದ ಹಾನಗಲ್ ಉಪಚುನಾವಣೆ ಕಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆದ್ದು ಬೀಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹರಕೆ ಹೊತ್ತಿದ್ದಾಗಿ ಹೇಳಿದ ಡಿಕೆಶಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ರು. ಒಟ್ಟಿನಲ್ಲಿ ಹಾನಗಲ್‍ನಲ್ಲಿ ಇಂದು ಡಿಕೆಶಿ ಟೆಂಪಲ್, ದರ್ಗಾ ಮತ್ತು ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೋದ್ರು.