ಬೆಂಗಳೂರು: ಕೇಳಿಸಿಕೊಳ್ಳುವಷ್ಟು ಶಾಂತಿ, ಸಹನೆ ಇಲ್ಲ ಅಂದರೆ ಅವರು ಆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ ಅಂತ ಅನಿಸುತ್ತದೆ. ಇಡೀ ಸರ್ಕಾರಕ್ಕೇ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
Advertisement
ಮಹಿಳೆಯ ಮೇಲೆ ಶಸಕ ಅರವಿಂದ ಲಿಂಬಾವಳಿ ದರ್ಪದ ಕುರಿತು ಪ್ರತಿಕ್ರಿಯಿಸಿದ ಅವರು, ಔಟರ್ ರಿಂಗ್ ರೋಡ್ ನವರು ಮಳೆಯಿಂದ ಆ ಕ್ಷೇತ್ರದಲ್ಲಿ ಏನಾಗಿದೆ ಅಂತ ಸರ್ಕಾರಕ್ಕೆ ಬರೆದಿದ್ದಾರೆ. ಅವರಿಗೆ ಎಷ್ಟು ಕೋಟಿ ನಷ್ಟ ಆಗಿದೆ ಅಂತ ಹೇಳಿದ್ದಾರೆ. ಅವರಿಗೆ ಬಾಯಿ ಇತ್ತು ಹೇಳುವ ಶಕ್ತಿ ಇತ್ತು ಪತ್ರ ಬರೆದಿದ್ದಾರೆ. ಆದರೆ ಶಕ್ತಿ ಇಲ್ಲದ ಮಹಿಳೆಯರು ಯಾವುದೇ ಪಾರ್ಟಿ ಇರಬಹುದು, ಶಾಸಕರಿಗೆ ಕೇಳದೇ ಇನ್ನು ಯಾರಿಗೆ ಕೇಳಬೇಕು ಎಂದು ಪ್ರಶ್ನಿಸಿದರು.
Advertisement
Advertisement
ಕೇವಲ ಲಿಂಬಾವಳಿಗೆ ಮಾತ್ರವಲ್ಲ, ಯಾರಿಗೂ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ. ಇದು ಸರ್ಕಾರದ ವೈಫಲ್ಯ. ಅಧಿಕಾರಿಗಳ ಕೈಗೊಂಬೆ ಆಗಿಟ್ಟುಕೊಂಡು ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ
Advertisement
ಬ್ರಾಂಡ್ ಬೆಂಗಳೂರು ಹಾಳಗಿರುವ ಬಗ್ಗೆ ಐಟಿಯವರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಶಕ್ತಿ ಇದೆ ಅವರು ಬರೆಯುವ ಮೂಲಕ ಹೇಳಿದ್ದಾರೆ. ಬ್ರಾಂಡ್ ಇಲ್ಲಾ ಏನೂ ಇಲ್ಲ. 20 ವರ್ಷದಿಂದ ಉಳಿಸಿದ್ದೆವು. ಎಸ್.ಎಂ.ಕೃಷ್ಣ ಕಾಲದಲ್ಲೂ ಇತ್ತು. ಸಿದ್ದರಾಮಯ್ಯ ಕಾಲದಲ್ಲೂ ಬ್ರಾಂಡ್ ಬೆಂಗಳೂರು ಉಳಿಸಿದ್ದೆವು. ಈಗ ಎಲ್ಲಾ ಗೋವಿಂದ ಗೋವಿಂದ ಎಂದು ಬಿಜೆಪಿ ವಿರುದ್ಧ ಗರಂ ಆದರು.