ನವದೆಹಲಿ: ಪಾವಗಡ ಸೋಲಾರ್ ಪಾರ್ಕ್ (Pawagada Solar Park) ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI)ಗೆ ಒಪ್ಪಿಸಿ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಇಡಿ ಅಧಿಕಾರಿಗಳ ಮುಂದೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ಯಾಕೆ ನಿವೃತ್ತ ಜಡ್ಜ್ ಸಿಬಿಐಗೆ ಒಪ್ಪಿಸಿ. ತಪ್ಪಾಗಿದ್ದರೇ ನನ್ನ ಗಲ್ಲಿಗೇರಿಸಿ. ಅತ್ಯುತ್ತಮ ಪ್ರಾಜೆಕ್ಟ್ ಅಂತ ಮೋದಿ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿ, ಸರ್ಟಿಫಿಕೇಟ್ ಕೊಟ್ಟಿದೆ. ದೇಶಕ್ಕೆ ಮಾದರಿ ಅಂತ ಮೋದಿ (Narendra Modi) ಸರ್ಕಾರ ಹೇಳಿದೆ ಎಂದರು.
ಯಾವ ಪ್ರಕರಣದಲ್ಲಿ ಸಮನ್ಸ್ ನೀಡಿದ್ದಾರೆ ಗೊತ್ತಿಲ್ಲ. ಸಮನ್ಸ್ ನಿಂದ ವಿನಾಯಿತಿ ಕೋರಿ ಮನವಿ ಮಾಡಿದ್ದೆವು. ನಾವು ಸಾರ್ವಜನಿಕ ಜೀವನದಲ್ಲಿರುವವರು. ಶಾಸಕ ಮತ್ತು ಸಂಸದರಾಗಿರುವವರು ಕಾನೂನು ಪಾಲಿಸುವ ನಾಗರಿಕರಾಗಿದ್ದೇವೆ. ಆದರೆ ನಮ್ಮ ಮನವಿಯನ್ನ ತಿರಸ್ಕರಿಸಿ ಹಾಜರಾಗಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಭಾರತ್ ಜೋಡೋ ಯಾತ್ರೆ (Bharat Jodo Yatre) ಮೊಟಕುಗೊಳಿಸಿ ವಿಚಾರಣೆಗೆ ಇಂದು ಆಗಮಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ
Delhi | I've been summoned by ED. I requested them to call both me & my brother DK Suresh after Oct 23 but concerned officer directed us to present before him nonetheless. So we left yatra in middle & reached here: Karnataka Cong Chief DK Shivakumar before leaving for ED office pic.twitter.com/XTbaqntJfI
— ANI (@ANI) October 7, 2022
ಬೇರೊಬ್ಬ ತನಿಖಾಧಿಕಾರಿ ಈ ಬಾರಿ ಸಮನ್ಸ್ ಮಾಡಿದ್ದಾರೆ. ಸಮನ್ಸ್ ಯಾವುದಕ್ಕೆ ಅಂತ ಗೊತ್ತಿಲ್ಲ. ಯಂಗ್ ಇಂಡಿಯಾಕೆ ದೇಣಿಗೆ ನೀಡಿರೊ ಬಗ್ಗೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಬಾರಿ ಕೂಡ ಯಂಗ್ ಇಂಡಿಯಾ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಾರಿ ತನಿಖಾಧಿಕಾರಿ ಬದಲಾಗಿರುವುದರಿಂದ ಪ್ರಕರಣ ಯಾವುದೆಂದು ಸ್ಪಷ್ಟತೆ ಇಲ್ಲ ಎಂದು ಹೇಳಿ ಡಿಕೆಶಿ ಇಡಿ ಕಚೇರಿಯೊಳಗೆ ತೆರಳಿದರು.