ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಯುದ್ಧ ಜೋರಾಗಿದೆ ಎಂದು ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಪತ್ನಿ ಟಬು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಲ ಕಾಂಗ್ರೆಸ್ಸಿಗರು ತಮ್ಮ ಪಕ್ಷದವರಿಗೇ ಹಳ್ಳ ತೋಡಿದ್ದಾರೆ. ಪಕ್ಷದಲ್ಲಿ ಹೊಗಳುಭಟರು, ಚಾಡಿಕೋರರು, ಹಿತ್ತಾಳೆ ಕಿವಿ ನಾಯಕರೇ ತುಂಬಿದ್ದಾರೆ. ಪರಿಣಾಮ ಕಾಂಗ್ರೆಸ್ ಪಕ್ಷದ ಯುವ ಮುಖಂಡರಲ್ಲಿಯೂ ಒಗ್ಗಟ್ಟಿಲ್ಲ. ಇದು ಕಾಂಗ್ರೆಸ್ ಪಕ್ಷದ ಅತೀ ದೊಡ್ಡ ಸಮಸ್ಯೆಯಾಗಿದೆ ಎಂದು ಟಬು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯಗೋಸ್ಕರ ಕಾಂಗ್ರೆಸ್ ಪಕ್ಷವಿಲ್ಲ, ಪಕ್ಷಕ್ಕಾಗಿ ನಾವಿದ್ದೇವೆ: ಮಾಜಿ ಡಿಸಿಎಂ
Advertisement
Advertisement
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು, ಪಕ್ಷದ ಉಳಿವಿಗಾಗಿ ಯುವ ನಾಯಕರಿಗೆ ಅವಕಾಶ ಕೊಡಬೇಕು. ಹಿರಿಯ ಅನುಭವದಿಂದ ಪಕ್ಷ ಲಾಭ ಪಡೆದುಕೊಳ್ಳಬಹುದು. ಆದರೆ ಯುವ ಮತ್ತು ಕ್ರಿಯಾತ್ಮಕ ನಾಯಕರನ್ನ ಮುಂಚೂಣಿಗೆ ತರಬೇಕಿದೆ. ಆ ಮೂಲಕ ಹಿರಿಯ ನಾಯಕರು ಸೈಡಲ್ಲಿ ನಿಂತು ಮಾರ್ಗದರ್ಶನ ನೀಡಬೇಕು ಎಂದು ಟಬು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ: ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ
Advertisement
ನಿನ್ನೆಯಷ್ಟೇ ಕೆಪಿಸಿಸಿ ಸಭೆಯಲ್ಲಿ ಹಿರಿಯ ನಾಯಕರ ನಡುವೆ ಜಗಳ ಆಗಿತ್ತು ಎಂಬ ಬಗ್ಗೆ ಟಬು ಅವರ ಪೋಸ್ಟ್ ಪೂರಕವಾಗಿದೆ. ನಿನ್ನೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟಬು ಅವರು ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ನಿನ್ನೆಯ ಸಭೆಯಲ್ಲಿ ಯಾವುದೇ ರೀತಿಯ ಅಸಮಾಧಾನಕರ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.
Advertisement
ಸದ್ಯ ಟಬು ಅವರ ಈ ಪೋಸ್ಟ್ ಗೆ ಕಾಂಗ್ರೆಸ್ ವಲಯದಿಂದಲೇ ಭಾರೀ ವಿರೋಧ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಟಬು ಯಾರು? ಪದೇ ಪದೇ ಅವರು ಏಕೆ ಪಕ್ಷದ ವಿಚಾರ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ದಿನೇಶ್ ಗುಂಡೂರಾವ್ ಅವರ ಅಥವಾ ಟಬು ರಾವ್ ಅವರ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಈ ಕುರಿತು ಹೈಕಮಾಂಡ್ ಗಮನಕ್ಕೆ ತರಲು ಮೂಲ ಕಾಂಗ್ರೆಸ್ಸಿಗರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ರಾಜ್ಯದ ಬೆಳವಣಿಗಳ ಬಗ್ಗೆ ಹೈಕಮಾಂಡ್‍ಗೆ ಮಾಹಿತಿ ನೀಡಲು ಮುಂದಾಗಿದ್ದ ಸಂದರ್ಭದಲ್ಲೇ ಟಬು ಅವರ ಈ ಪೋಸ್ಟ್ ಹೊಸ ಅಸ್ತ್ರವಾಗಿ ಲಭಿಸಿದೆ ಎನ್ನಲಾಗಿದೆ. ಇದನ್ನು ಓದಿ: ಸೈಲೆಂಟ್ ಚಕ್ರವ್ಯೂಹ- ಟಗರು ವಿರುದ್ಧ ವಾರ್?