ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ದು (Nalin Kumar Kateel) ಎಲುಬಿಲ್ಲದ ನಾಲಿಗೆ. ಬಚ್ಚಲು ಬಾಯಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು.
ಕೆಪಿಸಿಸಿ (KPCC) ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಕಾರ್ಯಕರ್ತರು ಕೈಗೆ ಚಪ್ಪಲಿ ತೆಗೆದುಕೊಳ್ಳುತ್ತಾರೆ ಎಂಬ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು. ಕಟೀಲ್ ಇದಕ್ಕೆ ಏನಾದರೂ ದಾಖಲೆ ಇದ್ರೆ ಕೊಡಲಿ. ಕಾಂಗ್ರೆಸ್ ಪಕ್ಷದಲ್ಲಿ ಆ ಘಟನೆ ಆಗಿದ್ರೆ ದಾಖಲೆ ಕೊಡಲಿ. ಕಟೀಲ್ ನಾಲಿಗೆಗೆ ಎಲುಬಿಲ್ಲ. ಬಾಯಿಗೆ ಬಂದಂತೆ ಮಾತಾಡ್ತಾರೆ. ಬಚ್ಚಲು ಬಾಯಿ ಅಂತಾ ಹಳ್ಳಿ ಕಡೆ ಕರೆಯುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಪ್ಪ, ಮಗಳ ರಾಜಕಾರಣಕ್ಕೆ ಅಂತ್ಯ ಹಾಡಲು ವಿಜಯಸಂಕಲ್ಪ ಅಭಿಯಾನ: ನಳಿನ್ ಕುಮಾರ್ ಕಟೀಲ್
Advertisement
Advertisement
ಮೊದಲು ವಿಶ್ವನಾಥ್, ಯತ್ನಾಳ್, ಸಿ.ಪಿ.ಯೋಗೇಶ್ವರ್ ಬಿಜೆಪಿ ಬಗ್ಗೆ ಮಾತನಾಡಿರುವುದಕ್ಕೆ ಕ್ರಮ ಕೈಗೊಳ್ಳಲಿ. ನಮ್ಮಂಥವರ ಬಗ್ಗೆ ರಿಯಾಕ್ಟ್ ಮಾಡಲು ಕಟೀಲ್ ಯೋಗ್ಯನಲ್ಲ. ಆದರೆ ಕಾಂಗ್ರೆಸ್ ಪಕ್ಷದ ಹೆಸರು ತಗೊಂಡಿದ್ದರಿಂದ ನಾನು ಪ್ರತಿಕ್ರಿಯೆ ಕೊಡ್ತಿದ್ದೇನೆ. ಕಟೀಲ್ ಒಂದು ಪಕ್ಷದ ಅಧ್ಯಕ್ಷ. ಅವರ ಪಕ್ಷದಲ್ಲಿ ಹೊಡೆದಾಟ ನಡೆಯುತ್ತಿದೆ. ಅದರ ಬಗ್ಗೆ ಹೇಳಿಕೆ ನೀಡಲಿ. ಕಟೀಲ್‌ಗೆ ಪಕ್ಷದ ಮೇಲೆ ಹಿಡಿತ ಇಲ್ಲ. ನಾವು ಅವನ ಬಗ್ಗೆ ಮಾತನಾಡುವಷ್ಟು ಅವನಿಗೇ ಯೋಗ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.
Advertisement
Advertisement
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂದ್ರು. ಈಗ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ಇದರ ಅರ್ಥ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಆನಂತರ ಅವರು ಘೋಷಣೆ ಮಾಡಿದ್ದಾರೆ. ನಾವು ವಿದ್ಯುತ್ ಗ್ಯಾರಂಟಿ ಕೊಟ್ಟಿದ್ದೇವೆ. ಆಮೇಲೆ ಗೃಹಲಕ್ಷಿ ಕೊಡುತ್ತಿದ್ದೇವೆ. ಬೆಲೆ ಏರಿಕೆಯು ಜನರನ್ನು ಹೈರಾಣ ಮಾಡಿದೆ. ಈ ಯೋಜನೆಯಿಂದ ಜನರಿಗೆ ಒಳ್ಳೆಯದಾಗುತ್ತೆ. ಯೋಜನೆ ಎಲ್ಲರಿಗೂ ಅನ್ವಯ ಆಗುತ್ತೆ. ನಾನು ತೆರಿಗೆ ಕಟ್ಟುತ್ತೇನೆ. ನನಗೆ ಬೇಡ ಅಂತಾ ಗ್ಯಾಸ್ ಸಬ್ಸಿಡಿ ಬಿಟ್ಟಿದ್ದೇನೆ. ಆತರಹ ಯೋಜನೆ ಬೇಡ ಅಂತ ಬಿಟ್ಟವರಿಗೆ ಅನ್ವಯ ಆಗಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ; ಅವರ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ – KGF Babu
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k