ಬೆಂಗಳೂರು: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕಾತಿಗೆ ಕೈ ಪಾಳಯದಲ್ಲಿ ಪೈಪೋಟಿ ಜೋರಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಬದಲಾವಣೆಗೂ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿ ಲಾಭಿ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಉಪ ಚುನಾವಣೆಗೂ ಮೊದಲೇ ತಮಗೆ ಪಕ್ಷದ ಜವಾವ್ದಾರಿ ವಹಿಸಿ, ಉಪ ಚುನಾವಣೆಯಲ್ಲಿ ಜಯ ಗಳಿಸೋದರ ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರ ರೂಪಿಸುವ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆಗೆ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
Advertisement
ಲಂಡನ್ ಪ್ರವಾಸದಿಂದ ರಾಜ್ಯಕ್ಕೆ ವಾಪಸ್ ಆಗಿರುವ ಜಿ.ಪರಮೇಶ್ವರ್ ಇಂದು ಸುದ್ದಿಗೋಷ್ಡಿ ಕರೆದು ಅಧ್ಯಕ್ಷ ಹುದ್ದೆ ಬಗ್ಗೆ ತಮ್ಮ ಭಾವನೆಗಳನ್ನ ಹಂಚಿಕೊಳ್ಳಲಿದ್ದಾರೆ. 2018 ರ ಚುನಾವಣೆವರೆಗೆ ತಾವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಅಂತಾ ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದಿದ್ದು, ಮುಂದಿನ ಚುನಾವಣೆ ಎದುರಿಸಲು ಅಧ್ಯಕ್ಷರ ಬದಲಾವಣೆ ಅನಿವಾರ್ಯ ಅಂತಾ ಕಾಂಗ್ರೆಸ್‍ನ ಪ್ರಮುಖ ನಾಯಕರು ಹೈಕಮಾಂಡ್‍ಗೆ ಒತ್ತಾಯಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Advertisement
ಡಿ.ಕೆ.ಶಿವಕುಮಾರ್ ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ರೆ, ಕೆ.ಎಚ್ ಮುನಿಯಪ್ಪ ಕೂಡಾ ರೇಸ್‍ನಲ್ಲಿದ್ದಾರೆ. ಅದ್ರೆ ಸಿಎಂ ಮಾತ್ರ ಎಸ್.ಆರ್.ಪಾಟೀಲ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಏನೇ ಬದಲಾವಣೆ ಇದ್ರೂ ಉಪ ಚುನಾವಣೆಯ ಬಳಿಕ ಅಂತಾ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ರಾಜ್ಯ ಕೈ ಪಾಳಯದ ಪ್ರಮುಖ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
Advertisement