ಧಾರವಾಡ: ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನಕಾರಿಯಾಗಿ ಮಾತನಾಡಿದ ವರದಿಯ ಬೆನ್ನಲ್ಲೇ, ಕೆಪಿಸಿಸಿ ಸದಸ್ಯ ದೀಪಕ್ ಚಿಂಚೋರೆ ಪ್ರಧಾನಿಯನ್ನು ಲುಚ್ಚಾ ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ
ಧಾರವಾಡದ ಪಾಲಿಕೆ ಸದಸ್ಯರಾಗಿರುವ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ದೀಪಕ್ ಚಿಂಚೋರೆ ಪ್ರಧಾನಿಗೆ ಲುಚ್ಚಾ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿದ ವಿಡಿಯೋ ವೈರಲ್ ಕೂಡ ಆಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಕ್ಷಮೆಯಾಚನೆಗೆ ಆಗ್ರಹಿಸಿದ್ದರು. ಆದರೆ ದೀಪಕ್ ಚಿಂಚೋರೆ ಕ್ಷಮೆಯಾಚಿಸಲು ನಿರಾಕರಣೆ ಮಾಡಿದ್ದಾರೆ.
Advertisement
ಇದನ್ನೂ ಓದಿ: ಮೋದಿಯನ್ನು ‘ಸೂ.. ಬೋ..’ ಎಂದು ತಮಿಳಲ್ಲಿ ಅವಾಚ್ಯವಾಗಿ ನಿಂದಿಸಿದ ಸಚಿವ ರೋಷನ್ ಬೇಗ್!
Advertisement
ಇನ್ನು ರಾಹುಲ್ ಗಾಂಧಿ ಬಗ್ಗೆ ಬಚ್ಚಾ ಅದು ಅಂತಾ ಹೇಳಿಕೆ ನೀಡ್ತಾರೆ, ಅದಕ್ಕೆ ಯಾರೂ ಆಕ್ಷೆಪಣೆ ಎತ್ತುವುದಿಲ್ಲ. ಪ್ರಧಾನಿ ಸ್ಥಾನದಲ್ಲಿ ಯಾರೇ ಇದ್ದರೂ ಅದಕ್ಕೆ ನಾನು ಗೌರವ ಕೊಡುತ್ತೇನೆ ಎಂದು ದೀಪಕ್ ಹೇಳಿದರು. ಇದೇ ವೇಳೆ ಬಿಜೆಪಿಯವರಿಂದ ನಾನು ಸಂಸ್ಕೃತಿ ಕಲಿಯಬೇಕಿಲ್ಲ, ಅವರೇ ಮೊದಲು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದವರು. ಹೀಗಾಗಿ ಮೊದಲು ಅವರು ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.
Advertisement
ಇದನ್ನೂ ಓದಿ: ಮೋದಿ ಬಿಜೆಪಿಯವರಿಗಷ್ಟೇ ಪ್ರಧಾನಿಯಲ್ಲ, ದೇಶದ ಪ್ರಧಾನಿ- ಕ್ಷಮೆಯಾಚಿಸಿದ ರೋಷನ್ ಬೇಗ್