ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದು, ಅವರಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಾರಸುದಾರರಿಗೆ ವಾಪಸ್ ಹಿಂದಿರುಗಿಸಿದ್ದಾರೆ. ಈ ಮೂಲಕ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕುಖ್ಯಾತ ಆರೋಪಿಗಳಿಂದ ಬರೋಬ್ಬರಿ 4 ಕೆಜಿ ಚಿನ್ನಾಭರಣಗಳು, 1.3 ಕೆಜಿ ಬೆಳ್ಳಿಯ ಸಾಮಾಗ್ರಿಗಳು ಸೇರಿದಂತೆ ಒಟ್ಟು 1.25 ಕೋಟಿ ಬೆಲೆ ಬಾಳವ ಮಾಲುಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಕೆ.ಪಿ ಅಗ್ರಹಾರ ಪೊಲೀಸರು ಅವುಗಳ ವಾರಿಸುದಾರರನ್ನು ಪೊಲೀಸ್ ಠಾಣೆಗೆ ಕರೆಸಿ ವಾಪಸ್ ನೀಡಿದ್ದಾರೆ.
Advertisement
Advertisement
ಕೆಪಿ ಅಗ್ರಹಾರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಡಿಸಿಪಿ ರವಿ ಡಿ ಚನ್ನಣ್ಣನವರ್ ಕೂಡ ಪೊಲೀಸರು ವಾರಸುದಾರರಿಗೆ ವಾಪಸ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.
Advertisement
ಎರಡು ದಿನಗಳ ಹಿಂದೆ ಕೆಪಿ ಅಗ್ರಹಾರ ಪೊಲೀಸರು ರಾಜಾ ಅಲಿಯಾಸ್ ಜಪಾನ್ ರಾಜಾ, ಕಿರಣ್ ಕುಮಾರ್ ಹಾಗೂ ನಾಗರಾಜ್ ಅಲಿಯಾಸ್ ಮತ್ತಿನಾಗರನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಕೆ.ಪಿ.ಅಗ್ರಹಾರ ಸೇರಿದಂತೆ ವಿಜಯನಗರ, ಎಚ್‍ಎಸ್‍ಆರ್ ಲೇಔಟ್ ಹಾಗೂ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಗಳ ಬಂಧಿಸಿದ ಕೆ.ಪಿ.ಅಗ್ರಹಾರ ಪೊಲೀಸರು
4 ಕೆಜಿ ಚಿನ್ನಾಭರಣಗಳು, 1.3 ಕೆಜಿ ಬೆಳ್ಳಿಯ ಸಮಾನುಗಳು ವಶ
1.25 ಕೋಟಿ ಬೆಲೆ ಬಾಳುವ ಮಾಲುಗಳನ್ನು ವಶಪಡಿಸಿಕೊಂಡ @KPagraharaps ತಂಡದ ಸದಸ್ಯರನ್ನು @CPBlr ರವರು ಅಭಿನಂದಿಸಿರುತ್ತಾರೆ
ವಶಪಡಿಸಿಕೊಂಡ ಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು pic.twitter.com/JcByE8cLtB
— Laxman B. Nimbargi, IPS (@DCPWestBCP) December 26, 2018
ಕಳ್ಳತನ ಹೇಗೆ ಮಾಡ್ತಿದ್ರು?
ಬಂಧಿತ ಆರೋಪಿಗಳು ಮೊದಲು ಬೈಕಿನಲ್ಲೇ ಮನೆಯನ್ನು ಗಮನಿಸುತ್ತಿದ್ದರು. ಮುಖ್ಯವಾಗಿ ಹಾಲಿನ ಪ್ಯಾಕ್, ರಂಗೋಲಿ, ಪೇಪರ್ ಗಳನ್ನು ನೋಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಯಾವ ಮನೆಯಲ್ಲಿ ರಂಗೋಲಿ ಇರುತ್ತಿರಲಿಲ್ಲವೋ ಅಥವಾ ಯಾವ ಮನೆಯಲ್ಲಿ ಹಾಲಿನ ಪ್ಯಾಕ್ ಹಾಗೂ ಪೇಪರ್ ಗಳನ್ನು ತೆಗೆದುಕೊಳ್ಳದೇ ಇರುತ್ತಿದ್ದರೋ ಅಂತಹ ಮನೆಗಳನ್ನೇ ಇವರು ಟಾರ್ಗೆಟ್ ಮಾಡಿಕೊಂಡು ಕ್ಷಣಮಾತ್ರದಲ್ಲಿ ಮನೆಯನ್ನು ದೋಚುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv