ಬಳ್ಳಾರಿ: ಜಿಲ್ಲೆಯ ಕೌಲ್‍ಬಜಾರ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸಿದ್ದಾರೆ. ಅಲ್ಲದೇ ಆತನಿಂದ 6.48 ಲಕ್ಷ ರೂ. ಮೊತ್ತದ 9 ಮೋಟಾರ್ ಸೈಕಲ್ ಹಾಗೂ 8 ಸ್ಕೂಟರ್ ಸೇರಿ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
19 ವರ್ಷದ ಹುಸೇನ್ ಅಹ್ಮದ್ ಅಲಿಯಾಸ್ ಸಮೀರ್ ಎಂಬವನನ್ನು ಟಿ.ಬಿ.ಸ್ಯಾನಿಟೋರಿಯಂ ಹತ್ತಿರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ಆರೋಪಿಯು ಕೌಲ್‍ಬಜಾರ್ ಹಾಗೂ ಬ್ರೂಸ್‍ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹಾಗೂ ಇತರೆ ಕಡೆಗಳಲ್ಲಿ ನಕಲಿ ಬೀಗಗಳನ್ನು ಉಪಯೋಗಿಸಿ ತಲೆಮರೆಸಿಕೊಂಡಿರುವ ಆರೋಪಿ-1 ಜಾವೀದ್‍ರೊಂದಿಗೆ ಸೇರಿ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳನ್ನು ಕಳವು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯಿಂದ 6.48 ಲಕ್ಷ ರೂ. ಬೆಲೆಬಾಳುವ 17 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಎಸ್‍ಪಿ ಅರುಣ ರಂಗರಾಜನ್, ಎಎಸ್‍ಪಿ ಲಾವಣ್ಯ, ಡಿಎಸ್‍ಪಿ ಉಮೇಶ್ ನಾಯಕ್ ಮಾರ್ಗದರ್ಶನದಲ್ಲಿ ಮೋಟಾರ್ ಸೈಕಲ್ ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆಹಚ್ಚಲು ಕೌಲ್ ಬಜಾರ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿ.ಚಂದನಗೋಪಾಲ್ ನಿರ್ದೇಶನದಲ್ಲಿ ಒಂದು ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತ್ತು.
Advertisement
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿ.ಚಂದನ್ ಗೋಪಾಲ್, ಅಪರಾಧ ವಿಭಾಗದ ಪಿಎಸ್‍ಐ ಎಚ್.ಬಿ.ವಿಜಯಲಕ್ಷ್ಮೀ, ಎಎಸ್‍ಐ ಲಾರೆನ್ಸ್ ಹಾಗೂ ಸಿಬ್ಬಂದಿ ನಾಗರಾಜ, ಅನ್ವರಭಾಷಾ, ರಾಮದಾಸ, ಬಸವರಾಜ, ರಾಮಲಿಂಗಪ್ಪ, ಬಿ.ಸಿದ್ದೇಶ್, ಎಂ.ರಾಜ, ಕೀರ್ತಿರಾಜ್, ಮಹಾಲಿಂಗಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇದೀಗ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಎಸ್‍ಪಿ ಅರುಣ ರಂಗರಾಜನ್ ಅವರು ಶ್ಲಾಘಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv