ಮಲಯಾಳಂನ ಕೊಟ್ಟಾಯಂ ಪ್ರದೀಪ್ ವಿಧಿವಶ

Public TV
2 Min Read
kottayam pradeep

ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ಅಂತ ಕರೆಯಲ್ಪಡುವ ಪ್ರದೀಪ್ ಕೆ. ಆರ್ (61) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಪ್ರದೀಪ್ ಅವರು ಕೊಟ್ಟಾಯಂ ಎಂಬ ತಮ್ಮ ಸ್ಥಳೀಯ ಸ್ಥಳದ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು. ಜೂನಿಯರ್ ಕಲಾವಿದರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು ರಂಗಭೂಮಿ ಮತ್ತು ದೂರದರ್ಶನ ಉದ್ಯಮದ ಭಾಗವಾಗಿದ್ದರು.

kottayam pradeep 2

ಪ್ರದೀಪ್ ಅವರಿಗೆ ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪ್ರದೀಪ್ ತಮ್ಮ ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 10 ನೇ ತರಗತಿಯಲ್ಲಿದ್ದಾಗ, ಅವರು ಎನ್‍ಎನ್ ಪಿಳ್ಳೈ ಅವರ ನಾಟಕದಲ್ಲಿ ಬಾಲ ಕಲಾವಿದರಾಗಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

kottayam pradeep 1

ಪ್ರದೀಪ್ ಅವರು ನಟನೆಯಲ್ಲದೇ ಎಲ್‍ಐಸಿ ಜೀವ ವಿಮಾ ನಿಗಮದ ಎಜೆಂಟ್ ಆಗಿ ಸಹ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ನಂತರವೂ ತಮ್ಮ ನಟನಾ ಪ್ರವೃತ್ತಿಯನ್ನು ಮುಂದುವರಿಸಿದ್ದರು. 90ರ ದಶಕದ ಆರಂಭದಲ್ಲಿ, ಟಿವಿ ಧಾರಾವಾಹಿಯೊಂದರಲ್ಲಿ ಸ್ಕ್ರೀನ್ ಟೆಸ್ಟ್‍ಗಾಗಿ ಅವರು ತಮ್ಮ ಮಗನ ಜೊತೆ ಹೋಗಿದ್ದರು. ಈ ವೇಳೆ ಧಾರಾವಾಹಿಯ ನಿರ್ಮಾಪಕರು ಅವರಿಗೆ ಅದೇ ಧಾರಾವಾಹಿಯಲ್ಲಿ ಪಾತ್ರವನ್ನು ನೀಡಿದ್ದರು. ಇದನ್ನೂ ಓದಿ:  ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

1999 ರಲ್ಲಿ ಅವರು ಹಿರಿಯ ಐ.ವಿ.ಶಶಿ ನಿರ್ದೇಶನದ ಚಲನಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದರು. ನಂತರ ಅವರು 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರದೀಪ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ನಟಿಸಿರುವ ಸಣ್ಣ ಪಾತ್ರಗಳಿಂದಲೇ ಚಿತ್ರರಂಗದಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಂಡಿದ್ದರು.

pinarayi vijayam

ಐವಿ ಶಶಿಯವರ ಈ ನಾಡು ಇನ್ನಲೇ ವರೇ (2001) ಅವರ ಮೊದಲ ಚಿತ್ರವಾಗಿದೆ. ಅವರು ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ 70ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅವರ ಕೆಲವು ಪಾತ್ರಗಳು ಮತ್ತು ಸಂಭಾಷಣೆಗಳು ಇಂದಿಗೂ ಜನಪ್ರಿಯವಾಗಿವೆ.

ಗೌತಮ್ ಮೆನನ್ ಅವರ ವಿನೈತಾಂಡಿ ವರುವಾಯಾ ಮತ್ತು ಅದರ ಹಿಂದಿ, ತಮಿಳು ಮತ್ತು ತೆಲುಗು ರಿಮೇಕ್‍ಗಳ ಮೂಲಕ ಅವರು ಬೆಳಕಿಗೆ ಬಂದಿದ್ದರು. 2 ನೇ ಏಷ್ಯಾನೆಟ್ ಕಾಮಿಡಿ ಅವಾಡ್ರ್ಸ್ 2016 ರಲ್ಲಿ ವಿವಿಧ ಪಾತ್ರಗಳಿಗಾಗಿ ಪ್ರದೀಪ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬರುವ ಮೋಹನ್ ಲಾಲ್ ಅಭಿನಯದ ಚಿತ್ರ ‘ಆರಟ್ಟು’ ಅವರ ಕೊನೆಯ ಸಿನಿಮಾವಾಗಿದೆ.

ಗುರುವಾರದಂದು ಪ್ರದೀಪ್ ಅವರ ಅಂತ್ಯಕ್ರಿಯೆ ನಡೆಯಲಿದೆ, ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *