ಮಂಗಳೂರು: ತುಳುನಾಡಿನ ವೀರ ಪುರುಷರೆಂದು ಆರಾಧಿಸಿಕೊಂಡು ಬರುತ್ತಿರುವ ಕೋಟಿ-ಚೆನ್ನಯರ ತವರು ಮನೆ ಎಂದು ಗುರುತಿಸಿಕೊಂಡಿರುವ ಪುತ್ತೂರಿನ ಗೆಜ್ಜೆಗಿರಿ ನಂದಲ ಹಿತ್ತಲಿನಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ.
ಕೋಟಿ-ಚೆನ್ನಯರ ತಾಯಿ ದೇಯಿ ಬೈದೆದಿ, ಭಾವ ಸಾಯನ ಬೈದ್ಯ ಹಾಗೂ ಕೋಟಿ-ಚೆನ್ನಯರ ಸಾನಿಧ್ಯಗಳ ಗುಡಿಯನ್ನು ಇಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ಬ್ರಹ್ಮಕಲಶೋತ್ಸವ ನಡೆಯುವ ಸಂದರ್ಭದಲ್ಲೇ ಈ ಸ್ಥಳದಲ್ಲಿ ವಿಸ್ಮಯವೊಂದು ನಡೆದಿದೆ. ಸಾಯನ ಬೈದ್ಯ ಗುರು ಪೀಠದ ಬಳಿ ಹಾಕಲಾಗಿದ್ದ ಅರ್ಧ ನಾರೀಶ್ವರ ಚಂದ್ರಮಂಡಲದ ರಂಗೋಲಿ ಮೇಲೆ ಪುಟ್ಟ ಮಕ್ಕಳ ಎಂಟು ಹೆಜ್ಜೆಗಳು ಪತ್ತೆಯಾಗಿವೆ.
Advertisement
Advertisement
ಸತ್ಯ ಧರ್ಮ ಚಾವಡಿಯ ಬಳಿ ಪುರೋಹಿತರು ಈ ಚಂದ್ರಮಂಡಲವನ್ನು ಬಿಡಿಸಿ ಆ ಕೋಣೆಗೆ ಬಾಗಿಲು ಹಾಕಿ ಹೋಗಿದ್ದರು. ಸಂಜೆ ವೇಳೆಗೆ ಕೋಣೆಯ ಬಾಗಿಲು ತೆಗೆದ ಸಂದರ್ಭದಲ್ಲಿ ಈ ಪವಾಡ ಕಂಡು ಬಂದಿದೆ ಎನ್ನಲಾಗಿದೆ. ಚಂದ್ರ ಮಂಡಲದ ಮೇಲೆ ಪುಟ್ಟ ಮಕ್ಕಳ ಹೆಜ್ಜೆ ಗುರುತು ಹೇಗೆ ಬಂದಿದೆ ಎನ್ನುವ ಆಶ್ಚರ್ಯ ಎಲ್ಲರನ್ನೂ ಕಾಡಿದೆ. ಒಂದು ವೇಳೆ ಪುಟ್ಟ ಮಕ್ಕಳು ಈ ಚಂದ್ರಮಂಡಲದ ಮೇಲೆ ನಡೆದಿದ್ದೇ ಆದಲ್ಲಿ ರಂಗೋಲಿಯಿಂದ ಬಿಡಿಸಿದ ಚಂದ್ರಮಂಡಲ ಸಂಪೂರ್ಣ ಅಸ್ತವ್ಯಸ್ತವಾಗುತ್ತಿತ್ತು. ಆದರೆ ಚಂದ್ರಮಂಡಲ ಇದ್ದ ಹಾಗೇ ಇದ್ದು, ಪುಟ್ಟ ಮಕ್ಕಳ ಹೆಜ್ಜೆ ಗುರುತು ಹೇಗೆ ಬಂತು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗತೊಡಗಿದೆ.
Advertisement
ಕೋಟಿ-ಚೆನ್ನಯರು ತಮ್ಮ ಇರುವಿಕೆಯನ್ನು ಕ್ಷೇತ್ರದಲ್ಲಿ ತೋರಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳೂ ಇದೀಗ ಹರಿದಾಡಲಾರಂಭಿಸಿದೆ.