ಕೋಲಾರ: ಕೆಲವರಿಗೆ ತಲೆ ಕೆಟ್ಟಿದೆ, ಹೀಗಾಗಿ ಹುಚ್ಚು ಹಿಡಿದು ಸಿಎಂ ಸ್ಥಾನದ ಕುರಿತು ಮಾತನಾಡುತ್ತಿದ್ದಾರೆ ಎಂದು ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಹೇಳಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕೆಂಬ ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆಗೆ ಅವರು ತಿರುಗೇಟು ಕೊಟ್ಟಿದ್ದಾರೆ.
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಇದರಿಂದ ಸರ್ಕಾರ ಸಹ ಯಾವುದೇ ತೊಂದರೆ ಇಲ್ಲದಂತೆ ನಡೆದುಕೊಂಡು ಹೋಗುತ್ತಿದೆ. ಈ ಸಮಯದಲ್ಲಿ ಅಭಿವೃದ್ಧಿಯ ಬಗ್ಗೆ ಸಿಎಂ ಹಾಗೂ ಡಿಸಿಎಂ ಬಳಿ ಮಾತಾಡಲಿ. ಅದು ಬಿಟ್ಟು ಪಿನ್ ಚುಚ್ಚುವವರನ್ನು ಪಕ್ಷದಿಂದ ದೂರ ಇಡುವಂತೆ ಹಿರಿಯರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್
ಎಲ್ಲರಿಗೂ ಮಂತ್ರಿ ಹಾಗೂ ಸಿಎಂ ಸ್ಥಾನ ಬೇಕು ಎಂದು ಕೇಳಿದರೆ ಹೇಗೆ? ನನಗೂ ಪಿಎಂ ಆಗಬೇಕೆಂದು ಆಸೆ ಇದೆ. ಆದರೆ ಕೈ ಎಲ್ಲಿಯವರೆಗೆ ಎಟುಕುವುದೋ ಅಷ್ಟಕ್ಕೆ ಆಸೆ ಪಡಬೇಕು. ಕೆಲಸ ಮಾಡಲು ಆಸಕ್ತಿ ಇದ್ದರೆ ಕೆಲಸ ಮಾಡಿ, ಅದನ್ನು ಬಿಟ್ಟು ನಮ್ಮ ಜಾತಿಯವರು ಸಿಎಂ ಆಗಬೇಕು ಎನ್ನುವುದನ್ನ ಬಿಡಿ ಎಂದಿದ್ದಾರೆ.
ಇನ್ನೂ ಜಾತಿಯ ವಿಚಾರವಾಗಿ ಇಂತಹ ವೈದ್ಯರು, ಇಂತಹ ಎಸ್ಪಿ ಹಾಗೂ ಗಾಳಿಯನ್ನು ಅವರವರ ಜಾತಿಗೆ ವಿಂಗಡಣೆ ಮಾಡಿಕೊಳ್ಳಲಿ. ಇಂತಹ ವಿಚಾರಗಳನ್ನು ತಲೆಕೆಟ್ಟವರು ಮಾತ್ರ ಮಾತನಾಡುತ್ತಾರೆ ಎಂದು ಅವರು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೋಮು ಸಂಘರ್ಷ – ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಕಿಡಿ ರಾಜ್ಯಕ್ಕೆ ಹಬ್ಬಬಹುದು: ವಿಜಯೇಂದ್ರ
Web Stories