ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Bank Robbery) ಪ್ರಕರಣ ಬೇಧಿಸಲು ಗುಪ್ತಚರ ಇಲಾಖೆ (Intelligence Department) ಸಹಾಯ ಮಾಡಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ (Anupam Agarwal) ಹೇಳಿದ್ದಾರೆ.
ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ (Mumbai) ಮೂಲದ ಗ್ಯಾಂಗ್‌ನಿಂದ ದರೋಡೆ ನಡೆದಿದೆ. ತಮಿಳುನಾಡು ಮೂಲದವರಾದ ದರೋಡೆಕೋರರು ದರೋಡೆ ಮಾಡಲೆಂದೇ ಮಂಗಳೂರಿಗೆ ಬಂದಿದ್ದರು. ಬಳಿಕ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು ಎಂದರು. ಇದನ್ನೂ ಓದಿ: ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮುಸ್ಲಿಂ ವ್ಯಕ್ತಿ ಮತಾಂತರ – ದೇವಾಲಯದಲ್ಲಿ ವಿವಾಹ
Advertisement
Advertisement
ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್. ಪ್ರಕಾಶ್@ಜೋಶ್ವಾ, ಮಣಿವಣ್ಣನ್‌ನನ್ನೂ ಬಂಧನ ಮಾಡಿದ್ದೇವೆ. ತಮಿಳುನಾಡಿನ ತಿರುವನ್ನೇಲಿಯಿಂದ ಬಂಧಿಸಿದ್ದೇವೆ. ಬಂಧಿತರಿಂದ ಫಿಯೆಟ್ ಕಾರ್ ವಶಪಡಿಸಿಕೊಂಡಿದ್ದೇವೆ. ದರೋಡೆಗೆ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರ್ ಬಳಸಿದ್ದರು. ಮುರುಗುಂಡಿ ಕಾರನ್ನು ತಿರುವನ್ನಲಿ ತನಕ ಕೊಂಡು ಹೋಗಿದ್ದರು. ಆರೋಪಿಗಳಿಂದ ಎರಡು ಗೋಣಿ ಚೀಲ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?
Advertisement
Advertisement
ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ಬಂಧಿತರಿಂದ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ.ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆ ಕೇಸ್ – ಮುಂಬೈ ಗ್ಯಾಂಗ್‌ಗೆ ಸೇರಿದ ಮೂವರು ಆರೋಪಿಗಳು ಅರೆಸ್ಟ್