ಕೊಪ್ಪಳ: ದೇಶದಲ್ಲೆಡೆ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಆದರೆ ನಗರದ ಖಾಸಗಿ ಶಾಲೆಯೊಂದು ಟ್ರೆಡಿಷನಲ್ ಡೇ ಆಚರಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದೆ.
ಕೊಪ್ಪಳದ ಖಾಸಗಿ ಶಾಲೆಯಲ್ಲಿ ಮಂಗಳವಾರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಶಾಲೆಯ ಮಕ್ಕಳೆಲ್ಲ ಸಂಪ್ರದಾಯಿಕ ಉಡುಗೆ ತೊಟ್ಟು ಹೊಸ ವರ್ಷ ಆಚರಣೆ ಮಾಡಿದರು. ಬಹುತೇಕ ಶಾಲೆಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷ ಆಚರಣೆ ಮಾಡಿದರೆ, ಇಲ್ಲಿನ ವಿದ್ಯಾರ್ಥಿಗಳು ಹೊಸ ವರ್ಷವನ್ನು ಟ್ರೆಡಿಷನಲ್ ಡೇ ಯನ್ನಾಗಿ ಆಚರಣೆ ಮಾಡಿದರು. ಅದರಲ್ಲೂ ಟ್ರೆಡಿಷನಲ್ ಡೇಯೊಂದಿಗೆ ಸಂದೇಶ ಸಾರುವ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ರ‍್ಯಾಂಪ್ ವಾಕ್ ಮಾಡಿದ್ದಾರೆ.
Advertisement
Advertisement
ಇಂಗ್ಲಿಷ್ ಮಾಧ್ಯಮ ಶಾಲೆಯಾದರೂ ಭಾರತದ ಸಂಸ್ಕೃತಿಯನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಶಿಕ್ಷಕರು ಹೊಸ ವರ್ಷದಂದು ಟ್ರೆಡಿಶನಲ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ್ನಾಟಕದ ನಾನಾ ಭಾಗದ ಸಂಪ್ರದಾಯಕ ಉಡುಗೆಯನ್ನ ಹಾಕಿಕೊಂಡು ಮಕ್ಕಳು ಹೊಸ ವರ್ಷವನ್ನು ಆಚರಣೆ ಮಾಡಿದರು. ಶಿಕ್ಷಕ ಸಿಬ್ಬಂದಿ ಕೂಡ ಹಳ್ಳಿ ಸ್ಟೈಲ್ ಸೀರೆಯನ್ನು ಧರಿಸಿ ಮಕ್ಕಳ ಜೊತೆ ಸಂಭ್ರಮಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv