ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಕೊಪ್ಪಳ ಜಿಲ್ಲೆಯ ಅಳವಂಡಿಯ ಉಜ್ಜಯನಿಪೀಠದ ಸಿದ್ದೆಶ್ವರ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಯವರು ತಾನು ಪ್ರೀತಿಸಿದ ಹುಡುಗಿಗಾಗಿ ಪೀಠ ತ್ಯಾಗ ಮಾಡಿದ್ದರು. ಅಲ್ಲದೆ ಜನವರಿಯಿಂದ ಕಾಣೆಯಾಗಿದ್ದು, ಯಾರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಈಗ ಸಿದ್ದೇಶ್ವರ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷವಾಗಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಮಠದ ಮಂಡಳಿ ಕಳೆದ ವಾರವಷ್ಟೇ ಸಿದ್ದವೀರ ಸ್ವಾಮೀಜಿ ಅವರನ್ನು ಗುಪ್ತವಾಗಿ ನೇಮಿಸಿದ್ದರು. ಈ ಸಂದರ್ಭದಲ್ಲೇ ಹಳೆ ಸ್ವಾಮೀಜಿ ಸಿದ್ದೇಶ್ವರ ಮಠದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.
Advertisement
Advertisement
ಈ ಬಗ್ಗೆ ಸಿದ್ದೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾನು ಪೀಠದಲ್ಲಿದ್ದಾಗ ನನಗೆ ಹೆಚ್ಚು ತೋಳಲಾಟ ಹಾಗೂ ಸಮಸ್ಯೆಗಳು ಆಗುತ್ತಿತ್ತು. ಮಠದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆ ವಿರೋಧಿಸಿದ್ದಕ್ಕೆ ನನ್ನ ಕುಟುಂಬಸ್ಥರೇ ನನಗೆ ಕಿರುಕುಳ ನೀಡುತ್ತಿದ್ದರು. ಈ ಮಠದಲ್ಲಿ ನಾನು ನೋಡೋದಕ್ಕೆ ಸ್ವಾಮೀಜಿ ಅಷ್ಟೇ. ಆದರೆ ನನಗೆ ಯಾವುದೇ ರೀತಿಯ ಅಧಿಕಾರ ಹಾಗೂ ಸ್ವಾತಂತ್ರ್ಯ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್
Advertisement
Advertisement
ಅಲ್ಲದೆ ನನ್ನ ದೊಡ್ಡಪ್ಪ ಗುರುಮೂರ್ತಿಸ್ವಾಮಿ ಆಸ್ತಿ ಸಲುವಾಗಿ ನನಗೆ ವಿಪರೀತ ಕಿರುಕುಳ ನೀಡುತ್ತಿದ್ದರು. ದೊಡ್ಡಪ್ಪ ಸಸಿ ಹಚ್ಚುವ ಜಾಗಕ್ಕೂ ತಗಾದೆ ತೆಗೆದು ಗೆರೆ ಹಾಕಿದ್ದರು. ಬೆಟ್ಟದೂರಲ್ಲಿ 11 ಎಕರೆ ಜಾಗ ಭಕ್ತರು ಕೊಟ್ಟದ್ದು, ದಾನದ ಜಾಗದ ಮಾಲೀಕತ್ವಕ್ಕೂ ವಿವಾದ ನಡೆದಿದೆ. ದೊಡ್ಡಪ್ಪ ಹಾಗೂ ಅವರ ಕುಟುಂಬ ಇಡೀ ಮಠವನ್ನೇ ಖಾಸಗಿಯಾಗಿ ಬಳಸುತ್ತಿದ್ದಾರೆ. ಕಮಿಟಿಯಲ್ಲಿ ಕುಟುಂಬದ ಎಂಟು ಜನ ಇದ್ದಾರೆ. ಗ್ರಾಮಸ್ಥರು ಒಬ್ಬರೂ ಇಲ್ಲ. ಇದನ್ನು ವಿರೋಧಿಸಿದೆ ಎಂದು ಮಾಜಿ ಸ್ವಾಮೀಜಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?
ಇಂತಹ ಮಾನಸಿಕ ಕಿರುಕುಳ ಹಾಗೂ ಕುಗ್ಗುಸುವಿಕೆ ಕೆಲಸದಿಂದ ನಾನು ಬೇಸತ್ತು ಹೋಗಿದ್ದೆ. ದೊಡ್ಡಪ್ಪ ಒತ್ತಾಯಪೂರ್ವಕವಾಗಿ ನನ್ನಿಂದ ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಮುಂಡರಗಿ ಕಾಲೇಜಿನಲ್ಲಿ ಪಾಠ ಮಾಡಲು ಹೋದಾಗ ಹುಡುಗಿ ನನ್ನನ್ನ ಪ್ರೀತಿಸಿದ್ದು ನಿಜ. ಇದನ್ನೇ ನೆಪ ಮಾಡಿಕೊಂಡು ದೊಡ್ಡಪ್ಪ ಮತ್ತು ಕುಟುಂಬದವರು ಸಾಕಷ್ಟು ಕಿರುಕುಳ ಕೊಟ್ಟು ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಪೀಠತ್ಯಾಗಕ್ಕೂ ಮೊದಲು ಜನರಿಗೆ ತಿಳಿಸೋಣ ಎಂದರೂ ಭೀತಿ ಹುಟ್ಟಿಸಿ, ಓಡಿಸಿದ್ದರು ಎಂದು ಸಿದ್ದೇಶ್ವರ ಸ್ವಾಮೀಜಿ ತಮ್ಮ ಅಳಲುತೋಡಿಕೊಂಡಿದ್ದಾರೆ.