ಕೊಪ್ಪಳ: ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೆಲವರು ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ.
ಪೊಲೀಸರು ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರೆ. ಈ ಮೂಲಕ ಕೊಪ್ಪಳ ನಗರ ಠಾಣಾ ಪೊಲೀಸರು ವಿಭಿನ್ನ ರೀತಿಯಲ್ಲಿ ಕೊರೊನಾ ವೈರಸ್ ಜಾಗೃತಿ ಮೂಡಿಸಿದ್ದಾರೆ.
Advertisement
Advertisement
ಭಾರತ ಲಾಕ್‍ಡೌನ್ ನಡುವೆಯೂ ವಾಹನ ಸವಾರರು ಅನಾವಶ್ಯಕವಾಗಿ ತಿರುಗಾಡುತ್ತಿದ್ದರು. ಈ ಹಿಂದೆ ಹಲವು ಬಾರಿ ಪೊಲೀಸರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಪೂಜೆ ಮಾಡಿ, ಮಂಗಳಮುಖಿಯರಿಂದ ರಾಖಿ ಕಟ್ಟಿಸಿದ್ದರು. ಆದರೂ ವಾಹನ ಸವಾರರು ಪೊಲೀಸರ ಮಾತಿಗೆ ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ಪೊಲೀಸರು ಇಂದು ವಿನೂತವಾಗಿ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರು.
Advertisement
ಗೋಣಿ ಚೀಲದಿಂದ ಮಾಡಿದ ಮಾದರಿ ಪಿಪಿಇ ಕಿಟ್ ಹಾಕಿಸಿದ್ದರು. ಗೋಣಿ ಚೀಲದ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಸಿದ್ದರು. ನಂತರ ಅನಾವಶ್ಯಕವಾಗಿ ತಿರುಗಾಡುವವವರಿಗೆ ಪಿಪಿಇ ಕಿಟ್ ಹಾಕಿಕೊಂಡವರು ತಿಳಿ ಹೇಳಿದ್ದಾರೆ.