ಕೊಪ್ಪಳ: ತಾಲೂಕಿನ ಗಿಣಗೇರಿಯಲ್ಲಿ ಕುದುರೆ ರೇಸ್ ಹೆಸರಿನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಪೊಲೀಸರು ತಡೆ ನೀಡಿದ್ದಾರೆ. ಈ ಸಂಬಂಧ ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಗಿಣಗೇರಿಯಲ್ಲಿ ಆಚರಣೆ ಹೆಸರಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕುದುರೆ ರೇಸ್ ನಡೆಯುತ್ತಿತ್ತು. ಕುದುರೆ ರೇಸ್ ನಲ್ಲಿ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದ್ದರಿಂದ ವ್ಯಾಪಕವಾಗಿ ಹೆಸರುಗಳಿಸಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕುದುರೆ ರೇಸ್‍ನ್ನು ಆಯೋಜಿಸಲಾಗಿತ್ತು.
Advertisement
ಕುದುರೆ ರೇಸ್ ಗೆ ಮೊದಲ ಬಾರಿ ಪೊಲೀಸರು ಬಂದೋಬಸ್ತು ಹಾಕಿದ್ದರಿಂದ ಆಯೋಜಕರು ಕುದುರೆ ರೇಸ್ ಅನ್ನು ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಕೊಪ್ಪಳ ಪೊಲೀಸರು ಕುದುರೆ ರೇಸ್ ಗೆ ಬ್ರೇಕ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಕುದುರೆ ರೇಸನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದ ಪೊಲೀಸರು ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸಿದ್ದಾರೆ.
Advertisement
ಕುದುರೆ ರೇಸ್ ಇದೆ ಎಂದು ಗುಂಪು ಗುಂಪಾಗಿ ಬರುತ್ತಿರುವ ಜನರನ್ನು ಪೊಲೀಸರು ಚದುರಿಸಿ ಕಳುಹಿಸಿದ್ದಾರೆ.