ಕೊಪ್ಪಳ: ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಲು ಹಿಂಜರಿಯುತ್ತಿದ್ದ ಕೂಲಿಕಾರ್ಮಿಕ ಮಹಿಳೆಯರು ಗದ್ದೆ ಕೆಲಸ ಮಾಡುತ್ತಿದ್ದ, ಸ್ಥಳಕ್ಕೆ ಇಂದು ಪ್ರೊಬೇಷನರಿ ಎಸಿ ಹಾಗೂ ತಾಪಂ ಇಓ ಕಾವ್ಯರಾಣಿ ಕೆ.ವಿ. ನೇತೃತ್ವದ ತಂಡ ತೆರಳಿ ಅವರಿಗೆ ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ.
ಸೆ.17ರಂದು ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಮೇಳ ಅಂಗವಾಗಿ ಗ್ರಾಮದ ಮನೆ ಮನೆಗೆ ಭೇಟಿ ಹಾಗೂ ಹೊಲಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸದ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಯಿತು. ನಂತರ ತಾಪಂ ಇಓ ಕಾವ್ಯರಾಣಿ ಕೆ.ವಿ. ಮಾತನಾಡಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದರು. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋಗಳಿಂದ ಲಕ್ಷ ಲಕ್ಷ ಗಳಿಸುವ ನಿತಿನ್ ಗಡ್ಕರಿ
ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಪಂ ತಾಪಂ, ಗ್ರಾಪಂ ಅಧಿಕಾರಿಗಳು ಜನರ ಮನವೊಲಿಸಿ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜನರು ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಮೋದಿ ಜನ್ಮದಿನದಂದು 2 ಕೋಟಿ ಮಂದಿಗೆ ಕೋವಿಡ್ ಲಸಿಕೆ
ಪ್ರಭಾರ ತಹಸೀಲ್ದಾರ್ ಮಹಾಂತಗೌಡ, ಗ್ರಾಪಂ ಪಿಡಿಒ ನಾಗೇಶ್, ತಾಲೂಕು ಐಇಸಿ ಕೋರ್ಡಿನೇಟರ್ ಬಾಳಪ್ಪ ತಾಳಕೇರಿ, ಗ್ರಾಪಂ ಸದಸದಯರಾದ ಸಿದ್ದೇಶ್ವರ, ಪಾಮಣ್ಣ ಸಲ್ಲರ್, ಲಕ್ಷ್ಮಮ್ಮ ಗುರ್ಕಿ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಶರಣಪ್ಪ, ಅಜೀಂ ಪ್ರೇಮ್ ಜೀ ಫೌಂಡೇಶನ್‍ನ ಅಯ್ಯನಗೌಡ ಇದ್ದರು.