ಕೊಪ್ಪಳ: ಮಸೀದಿಯಲ್ಲಿ ಹಿಂದೂ ದೇವರ ಫೋಟೋಗಳಿಗೆ ಪೂಜೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಹೌದು. ಮುಸ್ಲಿಂ ಹಬ್ಬವೆಂದು ಹೇಳುವ ಮೊಹರಂ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಹಿಂದೂ- ಮುಸ್ಲಿಮರು ಭಾವೈಕ್ಯತೆಯಿಂದ ಆಚರಿಸುತ್ತಾರೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗವು ಭಾವೈಕ್ಯತೆಯ ಸಂಕೇತವಾಗಿವಾಗಿದೆ. ಅಲಾಯಿ ದೇವರ ಕುಡುವ ಮಸೀದಿಯಲ್ಲಿ ಹಿಂದೂ ದೇವರಗಳ ಮೂರ್ತಿಗಳು ಇರುತ್ತವೆ. ಇಲ್ಲಿ ಮೊಹರಂ ಹಬ್ಬ ಸೇರಿ ವಿವಿಧ ಹಬ್ಬಗಳನ್ನು ಧರ್ಮ-ಬೇಧವಿಲ್ಲದೆ ಆಚರಿಸುತ್ತಾರೆ. ಅದಕ್ಕೆ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಮಸೀದಿ ಸಾಕ್ಷಿಯಾಗಿದೆ.
Advertisement
Advertisement
ಮುಸ್ಲಿಂ ಜನಾಂಗದವರ ಕೊನೆಯ ಮಾಸವಾಗಿರುವ ಮೊಹರಂ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮರು ಸೇರಿ ಆಚರಿಸುವುದು ವಿಶೇಷವಾಗಿದೆ. ಬಹುತೇಕ ಗ್ರಾಮಗಳಲ್ಲಿ ಮುಸ್ಲಿಂ ಜನಾಂಗದವರಿಗಿಂತ ಅಧಿಕವಾಗಿ ಹಿಂದೂಗಳೇ ಈ ಹಬ್ಬವನ್ನು ಆಚರಿಸುತ್ತಾರೆ. ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಹೀಗೆ ಎಲ್ಲವನ್ನು ಹಿಂದೂಗಳೇ ಆಚರಿಸುತ್ತಾರೆ. ಇದನ್ನೂ ಓದಿ: ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಅನುಮತಿ
Advertisement
ಕೊಪ್ಪಳ ತಾಲೂಕಿನ ಮುದ್ದಾ ಬಳ್ಳಿಯಲ್ಲಿ ಸುಮಾರು 25 ಮುಸ್ಲಿಂ ಕುಟುಂಬಗಳಿವೆ. ಇಲ್ಲಿ ಹಿಂದೂಗಳು ಅಧಿಕವಾಗಿದ್ದಾರೆ. ಗ್ರಾಮದಲ್ಲಿ ಈಗ ಮೊಹರಂ ಹಬ್ಬಕ್ಕಾಗಿ ಅಲಾಯಿ ದೇವರನ್ನು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಮಸೀದಿ ಯಲ್ಲಿ ಒಂದು ವಿಶೇಷವಿದ್ದು, ಇತ್ತೀಚೆಗೆ ಮಸೀದಿ ನವಿಕರಣ ಮಾಡುವಾಗಿ ಇಲ್ಲಿ ಹಿಂದೂ ದೇವರಾದ ಪರಮಾತ್ಮ, ದುರ್ಗಾದೇವಿ, ಸರಸ್ವತಿ, ಲಕ್ಷ್ಮಿ, ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮಿಜಿಗಳ ಚಿತ್ರವಿರುವ ಕಲ್ಲುಗಳನ್ನು ಮಸೀದಿಯಲ್ಲಿ ಜೋಡಿಸಿದ್ದಾರೆ. ಇದು ಮುಸ್ಲಿಂ ಜನಾಂಗದವರಿಗೆ ಸೇರಿದ್ದಾಗಿದ್ದರೂ ಇಲ್ಲಿ ಹಿಂದೂ-ಮುಸ್ಲಿಮರು ಒಂದೇ ಎಂಬಂತೆ ಇಲ್ಲಿ ಅಲ್ಲಾ- ಅಲ್ಲಮ್ ಒಂದೇ ಎಂದು ಸಾರಿದ್ದಾರೆ.
Advertisement
ಮೊಹರಂ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಂಡರೆ, ಹಿಂದೂಗಳ ಹಬ್ಬವಾದ ದೀಪಾವಳಿ, ದಸರಾ ಸೇರಿ ವಿವಿಧ ಹಬ್ಬಗಳಲ್ಲಿ ಮುಸ್ಲಿಂ ಜನಾಂಗದವರು ಸಹ ಅಷ್ಟೆ ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ. ಇದರಿಂದಾಗಿ ಇಲ್ಲಿ ಜಾತಿ-ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯದಿಂದ ಹೊಡೆದಾಡುತ್ತಿರುವಾಗ ಮುದ್ದಾಬಳ್ಳಿ ಗ್ರಾಮಸ್ಥರು ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಸಿಕ್ತು ಫೋನ್