ಕೊಪ್ಪಳ: ಉತ್ತರ ಆಪ್ರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಇದೀಗ ವ್ಯಕ್ತಿಯ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸೈಯದ್ ಫಾರೂಕ್ ಬಾಷಾ ಖಾದ್ರಿ (25) ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿಯವ ಆಪ್ತ ಸಹಾಯಕ ಸೈಯದ್ ಬದ್ರುದ್ದಿನ್ ಅವರ ಪುತ್ರ ಉತ್ತರ ಆಫ್ರಿಕಾದ ಸೂಡಾನ್ ನ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
Advertisement
ಕಂಪೆನಿಯ ವಾಹನದಲ್ಲಿ ಕೆಲಸ ತೆರಳುತ್ತಿರುವಾಗ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಫಾರೂಖ್ ಮತ್ತು ವಾಹನದ ಚಾಲಕ ಮೃತಪಟ್ಟಿದ್ದಾರೆ. ಇದೀಗ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಫಾರೂಖ್ ಸಂಬಂಧಿಕರು ವಿದೇಶಾಂಗ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಹಾಯ ಮಾಡುವುದಾಗಿ ಪ್ರತಿಕ್ರಿಯಿಸಿಸಿ, ಸಂಬಂಧಪಟ್ಟವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
Advertisement
ಸದ್ಯ ಸೈಯದ್ ಬದ್ರುದ್ದಿನ್‍ರ ಕುಟುಂಬಸ್ಥರು ಆಂಧ್ರದ ಕರ್ನೂಲ್ ನಲ್ಲಿ ವಾಸವಾಗಿದ್ದಾರೆ.
Advertisement
@SushmaSwaraj My Cousin Syed Farooq Basha shoot Dead yesterday in Juba South Sudan.. plz help us to recover his body to India… pic.twitter.com/1GmCjsMkT1
— syed ejaz hussain (@syed_ejaz) February 18, 2017
Advertisement
Indian High Commissioner in South Sudan – Plz contact the bereaved family and help them. @eoijuba https://t.co/74eVfn6d5v
— Sushma Swaraj (@SushmaSwaraj) February 19, 2017