– ಬಿಜೆಪಿ ಟಿಕೆಟ್ ಸಿಗದಿದ್ರೆ ಸಂಗಣ್ಣ ಕರಡಿ ಕಾಂಗ್ರೆಸ್‍ಗೆ
ಕೊಪ್ಪಳ: ಲೋಕಸಮರ ಟಿಕೆಟ್ ವಿಚಾರಕ್ಕೆ ಸಂಬಂಧ ಕೊಪ್ಪಳದಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್‍ನಿಂದ ರಾಜಶೇಖರ್ ಹಿಟ್ನಾಳ್ ಹೆಸರು ಪಕ್ಕಾ ಆಗುತ್ತಿದ್ದಂತೆಯೇ ಅಸಮಾಧಾನದ ಹೊಗೆ ಎದ್ದಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಸೇರುವ ಸಾಧ್ಯತೆ ಇದೆ. ಈಗಾಗಲೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಂಪ್ ಆಗಿದ್ದರು. ಮೊದಲಿನಂದಲೂ ಹಿಟ್ನಾಳ್ ಕುಟುಂಬದೊಂದಿಗೆ ವಿರೂಪಾಕ್ಷಪ್ಪ ಸಂಬಂಧ ಅಷ್ಟಕಷ್ಟೆ ಇತ್ತು. ಇದೀಗ ರಾಜಶೇಖರ್ ಹಿಟ್ನಾಳ್ ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ತೊರೆಯುವ ಸಾಧ್ಯತೆಗಳು ಕಂಡುಬರುತ್ತಿದೆ.
ಇದು ಮೈತ್ರಿ ಕಥೆಯಾದ್ರೆ, ಬಿಜೆಪಿಯದ್ದೂ ಅಷ್ಟೇ ಆಗಿದೆ. ಒಂದು ವೇಳೆ ಬಿಜೆಪಿಯಿಂದ ಸಂಗಣ್ಣ ಕರಡಿಗೆ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ ಅನ್ನೋ ಊಹಾಪೋಹಗಳು ಎದ್ದಿವೆ. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತ ಧರ್ಮಣ್ಣ ಹಟ್ಟಿ ಅವರು ಸಂಗಣ್ಣ ಕರಡಿ ಸಮುದಾಯವೂ ಕಾಂಗ್ರೆಸ್‍ಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.