ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

Public TV
1 Min Read
KPL MURDER ATTEMPT

ಕೊಪ್ಪಳ: ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

KPL MURDER AV 3

ಮುದೇನೂರು ಗ್ರಾಮದ ಯುವತಿ ಶಹನಾಜ್ ತಾವರಗೇರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಗಾವತಿ ತಾಲೂಕು ಮರ್ಲಾನಹಳ್ಳಿ ಗ್ರಾಮದ ಅಮರೇಗೌಡ ಈ ಕೃತ್ಯವೆಸಗಿದ್ದಾನೆ.

ಯಲಬುರ್ಗಾ ತಾಲೂಕು ಚೌಡಾಪುರ ಗ್ರಾಮದ ನಿವಾಸಿಯಾದ 23 ವರ್ಷದ ಶಹನಾಜ್, ಕಿರಿಯ ಆರೋಗ್ಯ ಸಹಾಯಕಿಯಾಗಿ ಮುದೇನೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಷ್ಟಗಿಯಲ್ಲಿ ನಡೆಯುತ್ತಿರುವ ತರಬೇತಿಗೆ ಹಾಜರಾಗಲು ಶಹನಾಜ್ ತಾಯಿಯೊಂದಿಗೆ ಮುದೇನೂರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಡ್ರಾಪ್ ಮಾಡುವುದಾಗಿ ಬೈಕ್‍ನಲ್ಲಿ ಕರೆತಂದ ಅಮರೇಶ, ಕುಷ್ಟಗಿ ಸಮೀಪ ಬೈಕ್ ನಿಲ್ಲಿಸಿ ಶಹನಾಜ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳ ಸಹಾಯಕ್ಕೆ ಮುಂದಾದ ಶಹನಾಜ್ ತಾಯಿಗೂ ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಇಬ್ಬರೂ ಸದ್ಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

KPL MURDER AV 5

ಶಹನಾಜ್‍ಗೆ ಇತ್ತೀಚೆಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ. ಕೊಲೆಗೆ ಯತ್ನಿಸಿದ ಅಮರೇಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.

KPL MURDER AV 12

KPL MURDER AV 8

KPL MURDER AV 4

 

 

Share This Article