ಕೊಪ್ಪಳ: ಅಧುನಿಕ ಯುಗದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಶಿಕ್ಷಕರ ಪ್ರಯತ್ನದಿಂದ ಅಲ್ಲಿನ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗುತ್ತಿದೆ.
ಕೊಪ್ಪಳ ತಾಲೂಕಿನ ಉಪಳಾಪೂರ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಉಪಳಾಪೂರ ಮಕ್ಕಳಿಗೆ ಪ್ರೂಜೆಕ್ಟರ್ ಮೂಲಕ ಶಿಕ್ಷಣ ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಶಾಲೆಯಲ್ಲಿ ಪ್ರೂಜೆಕ್ಟರ್ ಅಳವಡಿಕೆ ಮಾಡಲಾಗಿದೆ. ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
Advertisement
Advertisement
ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ನಲಿ ಕಲಿ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯ ನಲಿ ಕಲಿ ಕೊಠಡಿಯನ್ನು ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಉಪಳಾಪೂರ ಶಾಲೆಯ ಶಿಕ್ಷಕ ಮಹೇಶ್ ತಮ್ಮ ಸ್ವಂತ ಹಣದಿಂದ ನಲಿ ಕಲಿ ಕೊಠಡಿಯನ್ನು ವಿನ್ಯಾಸ ಮಾಡಿದ್ದಾರೆ. ಉಪಳಾಪರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಡೀ ನಲಿ ಕಲಿ ಕೊಠಡಿಯನ್ನು ಶಿಕ್ಷಕರೇ ಪೈಟಿಂಗ್ ಮಾಡಿದ್ದಾರೆ. ಥರ್ಮಕೋಲ್ ಬಳಸಿ ಪಿಓಪಿ ಮಾದರಿಯಲ್ಲಿ ಕೊಠಡಿ ವಿನ್ಯಾಸ ಮಾಡಿದ್ದಾರೆ.
Advertisement
ಪೇಪರ್ ಸೀಟ್‍ಗಳನ್ನು ಕಟ್ ಮಾಡಿ ಕಾಗುಣಿತ ಹೊಂದಿಸುವ ಮಾದರಿಯಲ್ಲಿ ಶಿಕ್ಷಕರು ಡಿಸೈನ್ ಮಾಡಿದ್ದಾರೆ. ಅದೇ ರೀತಿ ಗೋಡೆಯನ್ನು ನಲಿ ಕಲಿ ಮಾದರಿಯಲ್ಲಿ ಮೂರು ಮಕ್ಕಳಿಗೊಂದು ಬೋರ್ಡ್ ನಿರ್ಮಿಸಿದ್ದಾರೆ. ನಲಿ ಕಲಿ ಕೊಠಡಿಯಲ್ಲಿ ಆಡಿಯೋ ಸಾಂಗ್ಸ್ ಮೂಲಕ ಪಾಠ ಮಾಡಲಾಗುತ್ತದೆ. ಜೊತೆಗೆ ಶಾಲೆಯ ಹೊರಗಡೆ ಮಕ್ಕಳಿಗೆ ಲೈಬ್ರರಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ.