ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರ ಕಲ್ಮಠದ ಕೊಟ್ಟೂರು ಸ್ವಾಮಿ ಮಹಿಳೆಯರೊಂದಿಗೆ ಲಾಡ್ಜ್ ನಲ್ಲಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷ ಪಬ್ಲಿಕ್ ಟಿವಿ ಕೊಟ್ಟೂರು ಸ್ವಾಮಿಗಳು ಲಾಡ್ಜ್ ನಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಬಗ್ಗೆ ಮೊದಲು ಸುದ್ದಿ ಮಾಡಿದ್ದು, ವರದಿ ಪ್ರಸಾರವಾದ ಬಳಿಕ ಕೆಲ ದಿನಗಳ ಕಾಲ ಕೊಟ್ಟೂರ ಶ್ರೀಗಳು ಮಠವನ್ನ ತೊರೆದಿದ್ದರು. ಆದರೆ ಆರು ತಿಂಗಳಿಂದ ಸ್ವಾಮೀಜಿಯನ್ನ ಮಠದಿಂದ ಉಚ್ಛಾಟಿಸುವಂತೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಇದೀಗ ಸ್ವಾಮೀಜಿ ಮತ್ತಷ್ಟು ಫೋಟೋಗಳು ವೈರಲ್ ಆಗಿವೆ. ಇದನ್ನು ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸ್ವಾಮಿ ಮಹಿಳೆಯೊಂದಿಗಿರುವ ಮತ್ತಷ್ಟು ಫೋಟೋಗಳನ್ನು ಬಿಡುಗಡೆ ಮಾಡಿರುವ ಹೋರಾಟಗಾರರು ಗಂಗಾವತಿ ನೂತನ ಶಾಸಕರಾದ ಪರಣ್ಣ ಮುನವಳ್ಳಿ ಅವರಿಗೆ ಸ್ವಾಮೀಜಿಯನ್ನು ಮಠದಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ. ಇನ್ನು ಕೆಲವರು ಸ್ವಾಮೀಜಿಯನ್ನ ತೆಗೆದು ಹಾಕದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿದ್ದಾರೆ. ಇದನ್ನು ಓದಿ: ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಕಲ್ಮಠ ಸ್ವಾಮಿ ಅಂದು ನಾನವನಲ್ಲ..ನಾನವನಲ್ಲ-ಇಂದು ನಾನೇ.. ನಾನೇ.. ಅಂದ
ಚುನಾವಣೆ ವೇಳೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರು ತಾವು ಶಾಸಕರಾಗಿ ಆಯ್ಕೆ ಆದರೆ ಸ್ವಾಮೀಜಿ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಅವರನ್ನು ಮಠದಿಂದ ತೆಗೆದು ಹಾಕುವ ಆಶ್ವಾಸನೆಯನ್ನು ನೀಡಿದ್ದರು. ಸದ್ಯ ಜನರಿಗೆ ನೀಡಿರುವ ಮಾತಿನಂತೆ ಸ್ವಾಮೀಜಿಯವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇದನ್ನು ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ
https://www.youtube.com/watch?v=3lbgvaviytI