ಕೊಪ್ಪಳ: ನಗರಸಭೆಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ. ಜೊತೆಗೆ ಮೀಸಲಾತಿ ಹೊರ ಬಿದ್ದಿದ್ದು, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯ ಮಹಿಳಾ ಮೀಸಲಾತಿ ಬಂದಿದೆ. ಆದರೆ ಮೀಸಲಾತಿ ಬದಲಾಯಿಸಲು ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ನಗರಸಭೆ ಅತಂತ್ರವಾಗಿ, ಕಾಂಗ್ರೆಸ್ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೇರೋದು ಬಹುತೇಕ ಖಚಿತವಾಗಿದೆ. ತಮ್ಮ ಆಪ್ತರಾದ ಅಮ್ಜದ್ ಪಟೇಲ್ ಹಾಗೂ ಮುತ್ತು ಕುಷ್ಟಗಿ ಜೊತೆ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಆಕ್ರೋಶ ಕೇಳಿ ಬಂದಿದೆ. ಸ್ವಪಕ್ಷದ ಕಾರ್ಯಕರ್ತರು ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಘೋಷಣೆಯಾಗುತ್ತಿದ್ದಂತೆ, ಕೆಲ ಪ್ರಭಾವಿಗಳಿಂದ ಅಧ್ಯಕ್ಷ ಸ್ಥಾನ ಕೈತಪ್ಪಿಸಲು ಬೆಂಗಳೂರು ಸೇರಿದ್ದಾರೆಂಬ ಪೋಸ್ಟ್‍ಗಳು ಸಾಮಾಜಿಕ ಜಾಲತಣಾದಲ್ಲಿ ಹರಿದಾಡುತ್ತಿವೆ.
Advertisement
ಲೋಕಸಭಾ ಚುನಾವಣೆ ದೃಷ್ಟಿಯಿಂದ ಶಾಸಕರು ಅಧ್ಯಕ್ಷ ಸ್ಥಾನವನ್ನ ಮುಸ್ಲಿಂ ಸಮುದಾಯಕ್ಕೆ ಬದಲಾಯಿಸಲು ಯತ್ನಿಸುತ್ತಿದ್ದಾರಂತೆ. ಅದಕ್ಕೆ ಪೂರವಾಗಿ ಅಮ್ಜದ್ ಪಟೇಲ್ ಅವರೊಂದಿಗೆ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವರಾದ ಜಮೀರ್ ಅಹ್ಮದ್ ಹಾಗೂ ಯು.ಟಿ ಖಾದರ್ ಅವರನ್ನ ಭೇಟಿ ಮಾಡಿ ಮೀಸಲಾತಿ ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv