ಪತ್ನಿಯನ್ನು ಕೊಂದು ಬಸ್‌ನಲ್ಲಿ ಪಾರ್ಸೆಲ್‌ – 20 ವರ್ಷ ತಲೆಮರೆಸಿಕೊಂಡಿದ್ದವನಿಗೆ ಜೀವಾವಧಿ ಶಿಕ್ಷೆ

Public TV
1 Min Read
Koppala crime

ಕೊಪ್ಪಳ: ಪತ್ನಿಯನ್ನು (Wife) ಕೊಲೆ ಮಾಡಿ 20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿಗೆ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿ ಹನುಮಂತ 2002 ರಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿ ಆಕೆಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ. ಆತನನ್ನು ಗಂಗಾವತಿ (Gangavati) ನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: 3ನೇ ಪತ್ನಿಯ ಹತ್ಯೆಗೈದು ಗೋಣಿ ಚೀಲದಲ್ಲಿ ಪ್ಯಾಕ್ – ಲಗೇಜ್ ಎಂದು ಸರ್ಕಾರಿ ಬಸ್ಸಲ್ಲಿ ಕಳುಹಿಸಿದ್ದವ 24 ವರ್ಷಗಳ ಬಳಿಕ ಅರೆಸ್ಟ್

ಏನಿದು ಪ್ರಕರಣ?
ಹನುಮಂತ ಪತ್ನಿಯ ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮೃತದೇಹವನ್ನು ಚೀಲದಲ್ಲಿ ತುಂಬಿ ಕಂಪ್ಲಿಗೆ ಹೋಗುವ ಸಾರಿಗೆ ಬಸನಲ್ಲಿ ಲಗೇಜು ಎಂದು ಹಾಕಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಬಸ್ ನಿರ್ವಾಹಕ ಚೀಲದಲ್ಲಿ ಮೃತದೇಹ ಇರುವುದು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಡುಕಾಟ ನಡೆಸಿದ ಪೊಲೀಸರು 20 ವರ್ಷಗಳ ನಂತರ ರಾಯಚೂರ ಜಿಲ್ಲೆಯ ಸಿರವಾರ್ ತಾಲೂಕಿನ ಆತನೂರ ಗ್ರಾಮದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದರು. ವಿಚಾರಣೆಗೆ ಹಾಜರುಪಡಿಸಿದ್ದ ವೇಳೆ ಅಪರಾಧಿ ಎಂದು ಪರಿಗಣಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿದೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ಮನರಂಜನಾ ಪಾರ್ಕ್ ಕಾಮಗಾರಿ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Share This Article