ಕೊಪ್ಪಳ: ನೆಚ್ಚಿನ ಶಿಕ್ಷಕ ವರ್ಗಾವಣೆಯಾದ ಹಿನ್ನೆಲೆ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಹೀರೆಸಿಂಧೋಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಇಲ್ಲಿನ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಾರದ ಸೋಮರೆಡ್ಡಿ ಹೆಚ್ಚುವರಿ ಶಿಕ್ಷಕ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಾಸ್ ಬಹಿಷ್ಕಾರ ಮಾಡಿ ಮಕ್ಕಳು ಪ್ರತಿಭಟನೆ ಮಾಡಿದ್ದಾರೆ.
ಶಿಕ್ಷಕ ಸೋಮರೆಡ್ಡಿ ಅವರನ್ನು ಹೀರೆಸಿಂಧೋಗಿಯ ಸರ್ಕಾರಿ ಪ್ರೌಢಶಾಲೆಯಿಂದ ಕಾರಟಗಿ ತಾಲೂಕಿನ ನವಲಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಶಾಲಾ ಮಕ್ಕಳು ನಮಗೆ ಸೋಮರೆಡ್ಡಿ ಶಿಕ್ಷಕರೇ ಬೇಕೆಂದು ಕ್ಲಾಸ್ ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.