ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ದೇಶದೆಲ್ಲೆಡೆ ಜನರ ಮೆಚ್ಚುಗೆ ಗಳಿಸಿದೆ. ಅಲ್ಲದೆ ಯಶ್ ಪಾತ್ರಕ್ಕೂ ಜನರು ಫುಲ್ ಫಿದಾ ಆಗಿದ್ದಾರೆ. ಯಶ್ ಬರೀ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ನಿಜಜೀವನದಲ್ಲೂ ಯಶ್ ಹೀರೋ ಆಗಿದ್ದಾರೆ. ಅದಕ್ಕೆ ಸಾಕ್ಷಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ.
ಭೀಕರ ಬರಗಾಲದಿಂದಾಗಿ ತಲ್ಲೂರು ಕೆರೆ ಬತ್ತಿ ಹೋಗಿತ್ತು. 2016 ಫೆಬ್ರವರಿ 28 ರಂದು ಯಶ್ ದಂಪತಿ ಯಶೋಮಾರ್ಗ ಫೌಂಡೇಶನ್ ಮೂಲಕ ಸುಮಾರು 4 ಕೋಟಿ ವೆಚ್ಚದಲ್ಲಿ ತಲ್ಲೂರು ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ರು. ಮಳೆಗಾಲ ಆರಂಭಕ್ಕೂ ಮುನ್ನ ಯಲಬುರ್ಗಾ ಸುತ್ತಮುತ್ತಲಿನ ಜನ ಸ್ವಯಂ ಪ್ರೇರಿತರಾಗಿ ಬಂದು ಕೆರೆಯ ಹೂಳನ್ನು ತೆಗೆದಿದ್ರು. 4 ಅಡಿಯಷ್ಟು ಹೂಳು ತೆಗೆದಾಗ ಕೆರೆಯಲ್ಲಿ ನೀರು ಜಿನುಗಿತ್ತು.
Advertisement
Advertisement
ಇಂದು ತಲ್ಲೂರು ಕೆರೆ ಸ್ವಚ್ಛ ನೀರಿನಿಂದ ಸುತ್ತಮುತ್ತಲಿನ ನೂರಾರು ಕುಟುಂಬ, ಜಾನುವಾರುಗಳ ದಾಹ ಇಂಗಿಸುತ್ತಿದೆ. ಈ ಕೆರೆಯಿಂದ ಸುತ್ತಮುತ್ತಲಿನ 20 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಪ್ರಾಣಿ-ಪಕ್ಷಿಗಳಿಗೆ ತಲ್ಲೂರು ಕೆರೆಯ ನೀರೇ ಆಸರೆಯಾಗಿದೆ. ಇಷ್ಟು ದಿನ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ತಲ್ಲೂರು ಜನ ರಾಖಿ ಭಾಯ್‍ಗೆ ಮತ್ತೊಮ್ಮೆ ಸಲಾಂ ಹೊಡೆಯುತ್ತಿದ್ದಾರೆ.
Advertisement
ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡದ ಕೆಲಸವನ್ನು ಓರ್ವ ಸಿನಿಮಾ ಕಲಾವಿದ ಯಶ್ ಮಾಡಿ ತೋರಿಸಿ ಇತರರಿಗೆ ಪ್ರೇರಕರಾಗಿದ್ದಾರೆ. ನಿಜವಾಗಿಯೂ ಸಲಾಂ ರಾಕಿ ಭಾಯ್.
Advertisement
https://www.youtube.com/watch?v=pMl0RRC1QLQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv