ಕೊಪ್ಪಳ: ರಾಜ್ಯದಲ್ಲಿ ಈಗಾಗಲೇ ಮರಳು ಮಾಫಿಯಾ, ಆಕ್ರಮ ಗಣಿಗಾರಿಕೆ ಮಾಫಿಯಾ, ಸುದ್ದಿಗಳನ್ನು ನೀವು ಕೇಳಿದ್ದಿರಿ. ಈಗ ರಾಜ್ಯದಲ್ಲಿ ಎಗ್ಗಿಲ್ಲದೇ ಅಕ್ಕಿ ಮಾಫಿಯಾ ನಡೆಯುತ್ತಿದೆ.
ಕೊಪ್ಪಳದ ಗಂಗಾವತಿ ಎಂದರೆ ಭತ್ತದ ನಾಡು ಎಂದೇ ಪ್ರಸಿದ್ಧಿ. ದೇಶದ ನಾನಾ ರಾಜ್ಯಗಳಿಗೆ ಇಲ್ಲಿ ಬೆಳೆಯುವ ಅಕ್ಕಿ ರಪ್ತು ಮಾಡಲಾಗುತ್ತದೆ. ಆದರೆ ಅಂತಹ ಭತ್ತದ ಕಣಜದಲ್ಲೆ ಇದೀಗ ಡುಪ್ಲಿಕೇಟ್ ಬ್ರಾಂಡ್ ಅಕ್ಕಿ ಮಾಫಿಯಾ ಎಗ್ಗಿಲ್ಲದೆ ನೆಡೆಯುತ್ತಿದೆ. ಜಿಲ್ಲೆಯ ಕೆಲ ರೈಸ್ ಮಿಲ್‍ಗಳಲ್ಲಿ ಈ ಡುಪ್ಲಿಕೇಟ್ ದಂಧೆ ನಡೆಯುತ್ತಿದೆ.
Advertisement
ಮಾರ್ಕೆಟ್ ಅಲ್ಲಿ ಸೋನಾ ಮಸೂರಿ ಅಕ್ಕಿ ಪಾಕೆಟ್‍ಗಳಿಗೆ ಬಾರೀ ಬೇಡಿಕೆ ಇದ್ದು ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ದಂಧೆಕೋರರು ಜನರಿಗೆ ಕಳಪೆ ಮಟ್ಟದ ಅಕ್ಕಿ ನೀಡಿ ಮೋಸ ಮಾಡುತ್ತಿದ್ದಾರೆ. ಉಚಿತವಾಗಿ ಸಿಗುವ ಈ ಅನ್ನಭಾಗ್ಯ ಅಕ್ಕಿ ಪಾಲಿಷ್ ಮಾಡಿ ಅದನ್ನು ಪ್ಯಾಕ್ 50 ರಿಂದ 60 ರೂ. ಬೆಲೆಗೆ ಮಾರಾಟವಾಗುತ್ತಿದೆ. ಈ ಅಕ್ಕಿಯನ್ನು ಪಾಲಿಷ್ ಮಾಡಲು ಉಪಯೋಗಿಸುವ ರಾಸಾಯನಿಕದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಭವವೂ ಇದೆ ಎನ್ನಲಾಗಿದೆ.
Advertisement
ಈ ವಿಚಾರದ ಬಗ್ಗೆ ಕೊಪ್ಪಳ ಡಿಸಿ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ 16 ಕ್ಕೂ ಹೆಚ್ಚು ಬ್ರಾಂಡೆಂಡ್ ಕಂಪನಿಗಳ ನಕಲಿ ಪ್ಯಾಕೆಟ್‍ಗಳು ಪತ್ತೆಯಾಗಿವೆ. ಕೂಡಲೇ ರೈಸ್ ಮಿಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.