– ಫೇಸ್ ಬುಕ್‍ನಲ್ಲಿ ರೆಡ್ಡಿ ಸಮಾಜದಿಂದ ಮಾಜಿ ಸಚಿವರ ಪರ ಬ್ಯಾಟಿಂಗ್
ಕೊಪ್ಪಳ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಪದೇ ಪದೇ ಹೇಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ರೆಡ್ಡಿ ಸಮುದಾಯದವರು ಕಿಡಿಕಾರಿದ್ದಾರೆ.
ಜಿಲ್ಲೆಯ ರೆಡ್ಡಿ ಸಮಾಜದ ಕೆಲವರು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣ ಅಸಮಾಧಾನ ಹೊರ ಹಾಕಿ, ನಾಯಕರಿಗೆ ಸವಾಲ್ ಹಾಕಿದ್ದಾರೆ. ನಾವು ಪ್ರತ್ಯೇಕ ಕರ್ನಾಟಕ ಮಾಡಿಕೊಂಡು ಜನಾರ್ದನ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಶರೇನೇಗೌಡ ಎಂಬವರ ಫೇಸ್ ಬುಕ್‍ನಲ್ಲಿ ಜನಾರ್ದನ ರೆಡ್ಡಿ ಪರ ಬ್ಯಾಟ್ ಬೀಸಿ, ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಅವರ ಪೋಸ್ಟ್ ಗೆ ಭಾರೀ ಬೆಂಬಲ ಸಿಕ್ಕಿದ್ದು, ಅನೇಕರು ಜನಾರ್ದನ ರೆಡ್ಡಿ ಬೆಂಬಲಕ್ಕೆ ನಿಂತಿದ್ದಾರೆ. ಉಳಿದಂತೆ ಕೆಲವರು ವ್ಯಂಗ್ಯವಾಡಿದ್ದಾರೆ.
Advertisement
Advertisement
ಜನಾರ್ದನ್ ರೆಡ್ಡಿ ಪ್ರತ್ಯೇಕ ಕರ್ನಾಟಕದ ಮುಂದಿನ ಸಿಎಂ ಎಂಬ ಪೋಸ್ಟ್ ಗೆ ರೆಡ್ಡಿ ಸಮಾಜದ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಅವಶ್ಯವಿದ್ದಾಗ ನೆನಪಾಗುವುದು ಜನಾರ್ದನ ರೆಡ್ಡಿ, ಆದರೆ ಅವರಿಗೆ ತೊಂದರೆ ಬಂದರೆ ನಮಗೆ ಸಂಬಂಧ ಇಲ್ಲಾ ಅಂತಾ ಹೇಳುತ್ತಿದ್ದಾರೆ ಎಂದು ರೆಡ್ಡಿ ಸಮಾಜದವರು ಆರೋಪಿಸಿದ್ದಾರೆ.
Advertisement
ಪೋಸ್ಟ್‍ನಲ್ಲಿ ಏನಿದೆ?:
ಕರ್ನಾಟಕದಲ್ಲಿ 25 ಲಕ್ಷ ರೆಡ್ಡಿ ಸಮಾಜದ ಜನರಿದ್ದಾರೆ. ಆದರೆ ಪ್ರಯೋಜನ ಏನು ಬಂತು? ನಮ್ಮ ನಾಯಕ ಜನಾರ್ದನ ರೆಡ್ಡಿ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ಜೈಲಿಗೆ ಹಾಕಲು ಯತ್ನಿಸುತ್ತಿದ್ದಾರೆ. ಆದರೆ ನಾವು ಅವರ ಸಹಾಯಕ್ಕೆ ನಿಂತಿಲ್ಲ. ನಮಗೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಿಸಲು ಜನಾರ್ದನ ರೆಡ್ಡಿ ಬೇಕು. ನಮ್ಮ ಸಮಾಜದ ಕಾರ್ಯಕ್ರಮ ನಡೆಸಲು ಅವರ ಸಹಾಯಬೇಕು. ರಾಜ್ಯದ ಯಾವುದೇ ರೆಡ್ಡಿಗೆ ತೊಂದರೆ ಆದರೆ ಅವರು ಬೇಕು. ಅಷ್ಟೇ ಏಕೆ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಮಾವೇಶಕ್ಕೆ ರೆಡ್ಡಿ ಬೇಕಾಗಿತ್ತು ಎಂದು ಸಮಾಜದ ಮುಖಂಡರ ಮೇಲೆ ಶರೇನೇಗೌಡ ಛಾಟಿ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews