ಕೊಪ್ಪಳ: ರೋಗಿಗಳ ಮುಂದೆಯೇ ಜಿಲ್ಲೆಯ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯೊಂದರ ನರ್ಸ್ ಹಾಗೂ ಫಾರ್ಮಸಿಸ್ಟ್ ಜಗಳವಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕಾರಟಗಿ ತಾಲೂಕಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದಿದೆ. ಸಿಬ್ಬಂದಿಯ ಜಗಳದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಹಿತಿ ಪಡೆದ ಡಿಎಚ್‍ಒ ವಿರುಪಾಕ್ಷರೆಡ್ಡಿ ಮಾದಿನೂರು ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ಆಗಿದ್ದೇನು? ಸಿದ್ದಾಪುರ ಪ್ರಾಥಮಿಕ ಆಸ್ಪತ್ರೆಯ ವೈದ್ಯರು ಸಭೆ ಇರುವುದರಿಂದ ಕೊಪ್ಪಳಕ್ಕೆ ಹೋಗಿದ್ದರು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಕೆಲ ರೋಗಿಗಳನ್ನು ತಪಾಸಣೆ ಮಾಡಿದ ನರ್ಸ್ ಗೀತಾ ಔಷಧಿ ಬರೆದುಕೊಟ್ಟಿದ್ದಾರೆ. ಆದರೆ ಫಾರ್ಮಸಿಸ್ಟ್ ಶಿಲ್ಪಾ ಔಷಧಿ ಕೊಡಲು ನಿರಾಕರಿಸಿದ್ದಾರೆ. ಒಂದು ವೇಳೆ ನೀವು ನೀಡಿದ ಔಷಧಿ ರೋಗಿಗಳ ಮೇಲೆ ದುಷ್ಪರಿಣಾಮ ಬೀರಿದರೆ ನಾನು ಹೊಣೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದರು.
Advertisement
ಔಷಧ ನೀಡುವ ಕೌಂಟರ್ ಗೆ ಬಂದ ನರ್ಸ್ ಗೀತಾ, ಶಿಲ್ಪಾ ಅವರ ಮೇಲೆ ರೇಗಾಡಿದ್ದಾರೆ. ಕೆಲ ಹೊತ್ತು ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸಿಬ್ಬಂದಿಯ ಜಗಳವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv