ಕೊಪ್ಪಳ: ದೇಶಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ಮಧ್ಯೆ ಸಂಸದ ಕರಡಿ ಸಂಗಣ್ಣ ಅವರು ಪೌರತ್ವ ಕಾಯ್ದೆ ಜಾರಿ ಹಾಗೂ ಶಾಂತಿಗಾಗಿ ಕೊಪ್ಪಳದಲ್ಲಿ ಚಂಡಿಕಾಯಾಗ ಹೋಮ ಮಾಡಿಸಿದ್ದಾರೆ.
ಕೊಪ್ಪಳದ ಪ್ರಸಿದ್ಧಿ ದೇವಸ್ಥಾನ ಹುಲಗಿ ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಸಂಸದ ಸಂಗಣ್ಣ ಕರಡಿ ಅವರು ಕುಟುಂಬ ಚಂಡಿಕಾಯಾಗ ಮಾಡಿಸುತ್ತಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು ನೊವು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸದರು ಕುಟುಂಬ ಸಮೇತ ಬಂದು ಲೋಕ ಕಲ್ಯಾಣಕ್ಕಾಗಿ ಚಂಡಿಕಾಯಾಗವನ್ನು ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಡುವೆ ಪೊಲೀಸ್‍ಗೆ ಹೂ ಕೊಟ್ಟ ಯುವತಿ – ಫೋಟೋ ವೈರಲ್
Advertisement
Advertisement
ಈ ವಿಶೇಷ ಯಾಗವನ್ನು ಶೃಂಗೆರಿ ಮತ್ತು ಉಡುಪಿ ಸ್ವಾಮೀಜಿಗಳಾದ ಪ್ರವೀಣ್ ತಂತ್ರಿ ಹಾಗೂ ಕೃಷ್ಣ ಮೂರ್ತಿ ಗಣಪಾಟಿ ಅವರ ನೇತೃತ್ವದಲ್ಲಿ ಹೊಮ ನೆಡೆಯತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು ಮಧ್ಯಾಹ್ನ ಒಂದು ಗಂಟೆಯವರೆಗೆ ಪೂಜೆ ಮುಗಿದಿದೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ