ಕೊಪ್ಪಳ: ವರ್ಷಕ್ಕೊಮ್ಮೆ ಜಾತ್ರೆಗೆ ಬರುವ ಗೋವಾ ಯುವತಿ ಹಾಗು ಯುವಕನ ನಡುವೆ ಪ್ರೇಮಾಂಕುರವಾಗಿದ್ದು, ಇಬ್ಬರೂ ಒಬ್ಬರನೊಬ್ಬರನ್ನು ಮೆಚ್ಚಿಕೊಂಡು ಮದುವೆಯನ್ನು ಸಹ ಆಗಿದ್ದಾರೆ. ಆದರೆ ಸದ್ಯ ಈ ಸುಂದರ ಪ್ರೇಮ ಕಹಾನಿಯಲ್ಲಿ ಯುವತಿ ಪೋಷಕರೇ ವಿಲನ್ ಗಳಾಗಿದ್ದಾರೆ.
ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ನಿವಾಸಿ ಸುರೇಶ್ ಸಿಂದಗಿ (26) ಮತ್ತು ಅನೀತಾ (21) ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಜಾತಿಯೂ ಬೇರೆಯಾಗಿದ್ದರಿಂದ ಅನೀತಾ ಪೋಷಕರು ಸುರೇಶ್‍ನಿಗೆ ನಿನ್ನ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇನ್ನೂ ಸುರೇಶ್ ಕುಟುಂಬಸ್ಥರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ಅನೀತಾ ಆರೋಪಿಸುತ್ತಿದ್ದಾರೆ.
ನಾವು ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಅನೀತಾಳ ಮನೆಯವರ ಬೆದರಿಕೆಯ ನಡುವೆಯೂ ಇಬ್ಬರೂ ಆಗಸ್ಟ್ 10ರಂದು ಆನೆಗೊಂದಿಯ ದುರ್ಗಾದೇವಿ ದೇಗುಲದಲ್ಲಿ ಮದುವೆಯಾಗಿದ್ದೇವೆ. ವಿವಾಹ ನೊಂದಣಿ ಮಾಡೋಕೆ ಸರ್ಕಾರಿ ಅಧಿಕಾರಿಗಳಿಗೆ ಎಲ್ಲ ದಾಖಲಾತಿ ಕೊಟ್ಟರೂ ನೊಂದಣಿ ಮಾಡಿಕೊಳ್ಳುತ್ತಿಲ್ಲ. ಅನಿತಾ ಮನೆಯವರ ಎಲ್ಲಡೆ ತಮ್ಮ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.
ನಮ್ಮ ಮನೆಯವರು ನಮಗಾಗಿ ಎಲ್ಲಡೆ ಹುಡುಕುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯವಿದೆ. ವಿವಾಹ ನೊಂದಣಿಗಾಗಿ ಸಹಾಯ ಮಾಡಿ. ಪೊಲೀಸರು ಬಳಿ ಹೋದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ನವಜೋಡಿ ಎಂದು ಅಂಗಲಾಚುತ್ತಿದ್ದಾರೆ.