ಕೊಪ್ಪಳ: ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೂವರು ಮಹಿಳೆಯರಿಗೆ ವಂಚಿಸಿ, 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಗಂಗಾವತಿ ತಾಲೂಕಿನ ಹಿರೇಡಕನಕಲ್ ಗ್ರಾಮದಲ್ಲಿ ನಡೆದಿದೆ.
ಉಮೇಶ್ ಲಿಂಗದಳ್ಳಿ ಮಹಿಳೆಯರಿಗೆ ವಂಚಿಸಿದ ಆರೋಪಿ. ಭಾರತ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ಜಮಾ ಆಗುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಅದರಂತೆ ಈಗಾಗಲೇ ಕೆಲವರ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಹಣ ಜಮಾ ಆಗಲು ನೀವು ಸ್ವಲ್ಪ ಹಣ ಖರ್ಚು ಮಾಡಬೇಕು ಎಂದು ಉಮೇಶ್ ಲಿಂಗದಳ್ಳಿ, ಹಿರೇಡಕನಕಲ್ ಗ್ರಾಮದ ಮೂವರು ಮಹಿಳೆಯರನ್ನು ನಂಬಿಸಿದ್ದ.
Advertisement
Advertisement
ಉಮೇಶ್ ಲಿಂಗದಳ್ಳಿ ಮಾತು ನಂಬಿದ್ದ ಮೂವರು ಮಹಿಳೆಯರು ತಲಾ 10 ಗ್ರಾಂ ಚಿನ್ನಾಭರಣ ಹಾಗೂ ಒಂದೊಂದು ಲಕ್ಷ ರೂ. ನೀಡಿದ್ದರು. ಆದರೆ ಹಣ ಬರುತ್ತೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಉಮೇಶ್‍ನ ಗೊತ್ತಾಗಿತ್ತು. ಹೀಗಾಗಿ ಹಣ ವಾಪಸ್ ನೀಡುವಂತೆ ಮಹಿಳೆಯರು ಎಂದು ದುಂಬಾಲು ಬಿದ್ದಿದ್ದರ. ಆದರೆ ಆರೋಪಿಯು ಬೌನ್ಸ್ ಆಗಿದ್ದ ಚೆಕ್‍ಗಳನ್ನು ನೀಡಿ ತಲೆಮರೆಸಿಕೊಂಡಿದ್ದಾನೆ.
Advertisement
ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಜೀವನ ಪೂರ್ತಿ ದುಡಿದು ಕುಟುಂಬಕ್ಕಾಗಿ, ಮಕ್ಕಳಿಗಾಗಿ ಜೋಡಿಸಿದ್ದ ಬಂಗಾರ ಹಣ ಹೋಯಿತಲ್ಲ ಎಂದು ಉಮೇಶ್ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ನಮಗೆ ಬರಬೇಕಾದ ಹಣ ಮತ್ತು ಬಂಗಾರ ವಾಪಸ್ ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.