ಕೊಪ್ಪಳ: ಕೊರೊನಾ ಸೋಂಕಿಗೆ ತುತ್ತಾಗಿರುವ ಮಹಿಳೆಯೊಬ್ಬರು ಬರೋಬ್ಬರಿ 158 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಬಿಡುಗಡೆಯಾದ ಅಪರೂಪದ ಪ್ರಕರಣಕ್ಕೆ ಕೊಪ್ಪಳದ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ.
Advertisement
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ಗೀತಾ (45) ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಜುಲೈ 13 ರಂದು ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ಗೀತಾ ದಾಖಲಾಗಿದ್ದರು. ಸೋಂಕಿತ ಮಹಿಳೆಯು ಒಟ್ಟು 104 ದಿನ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Advertisement
Advertisement
ರೋಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಶೇ.90ರಷ್ಟು ಶ್ವಾಸಕೋಶಕ್ಕೆ ಹಾನಿಯಾಗಿತ್ತು. ಆದರೂ ಸಾವನ್ನು ಗೆದ್ದು ಕೊರೊನಾ ಮುಕ್ತರಾಗಿದ್ದಾರೆ. ಸದ್ಯ ಸೋಂಕಿತ ಗೀತಾ ಸಂಪೂರ್ಣ ಗುಣಮುಖರಾಗಿದ್ದರೂ, ಕನಿಷ್ಠ ಆಕ್ಸಿಜನ್ ಸಪೋರ್ಟ್ ನಿಂದ ಉಸಿರಾಡುತ್ತಿದ್ದಾರೆ. ಸಾಕಷ್ಟು ಮುಂಜಾಗ್ರತೆ ಕ್ರಮಗಳ ಬಳಿಕ ವೈದ್ಯರು ಇಂದು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು